Mysore
18
clear sky

Social Media

ಮಂಗಳವಾರ, 18 ಫೆಬ್ರವರಿ 2025
Light
Dark

ಸಮಾಜ ಪರಿವರ್ತನೆಗೆ ಬೆಳಕು ಚೆಲ್ಲಿದ ವೇಮನ

ಮೈಸೂರು: ತಮ್ಮ ವಿಚಾರಧಾರೆಗಳ ಮೂಲಕ ಸಮಾಜ ಪರಿವರ್ತನೆಗೆ ಬೆಳಕು ಚೆಲ್ಲಿದ ವೇಮನ ಮಹಾನ್‌ ಸಂತ ಎಂದು ವಿಧಾನ ಪರಿಷತ್ ನ ಶಾಸಕ ಸಿ.ಎನ್‌ ಮಂಜೇಗೌಡ ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕರ್ನಾಟಕ ಕಲಾಮಂದಿರ ಆವರಣದ ಕಿರುರಂಗಮಂದಿರಲ್ಲಿ ಭಾನುವಾರ ನಡೆದ ವೇಮನ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೇಮನ ಸಮಾಜದ ಎಲ್ಲಾ ವರ್ಗ ಜನರಿಗೆ ಜಾತಿ ಬೇಧಗಳನ್ನು ತೊರೆದು ಬೆಳಕನ್ನು ತರುವಂತಹ ಕಾರ್ಯವನ್ನು ಮಾಡಿದ್ದಾರೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಪಿ. ಶಿವರಾಜು ಮಾತನಾಡಿ, ಮಹಾಯೋಗಿ ವೇಮನ ಅವರು ನಮ್ಮ ಇಡೀ ದೇಶಕ್ಕೆ ನೀಡಿರುವಂತಹ ಆದರ್ಶಗಳು ಬಹಳ ಸತ್ಯವಾಗಿವೆ ಇಂತಹ ಮಹಾನ್ ವ್ಯಕ್ತಿಗಳ ಜಯಂತಿಯ ಕಾರ್ಯಕ್ರಮವನ್ನು ಆಚರಿಸುತ್ತಾ ಇರುವುದು ಸಂತೋಷವನ್ನು ನೀಡುತ್ತದೆ ಎಂದು ಹೇಳಿದರು.

ಎಲ್ಲರೂ ಸಹ ಸಮಾನರು, ಯಾವುದೇ ಜಾತಿ ಬೇಧ ಇಲ್ಲದೆ ನಾವೆಲ್ಲರೂ ಒಂದು ಎಂಬುದನ್ನು ನಮಗೆ ತಿಳಿಸಿಕೊಟ್ಟಿರುವಂತಹ ವೇಮನಂತಹ ಮಹಾನ್ ದಾರ್ಶನಿಕರು ನಮಗೆ ದಾರಿದೀಪ ವಾಗಿದ್ದಾರೆ ಎಂದು ಹೇಳಿದರು.

ಬರೀ ನಾವು ಮಾತ್ರ ಜಯಂತಿಯನ್ನು ಆಚರಿಸುತ್ತೇವೆ ಎಂದು ಹೇಳದೆ ನಾವೆಲ್ಲರೂ ಸೇರಿ ಜಯಂತಿಯನ್ನು ಆಚರಿಸುತ್ತೇವೆ ಎಂಬ ಪರಿಕಲ್ಪನೆ ನಮ್ಮಲ್ಲಿ ಬರಬೇಕು ಎಂದು ತಿಳಿಸಿದರು.

ಸಾಹಿತ್ಯ ಎಂಬುದರಲ್ಲಿ ಒಂದು ವಿಶೇಷವಾದಂತಹ ಶಕ್ತಿ ಇದೆ. ಸಾಹಿತ್ಯವನ್ನು ಓದುವುದರಿಂದ ನಮ್ಮ ಜೀವನವನ್ನ ಯಾವ ರೀತಿ ಬದಲಾವಣೆ ಮಾಡಿಕೊಳ್ಳುತ್ತೇವೆ ಹಾಗೂ ಹೇಗೆ ನಮ್ಮ ಜೀವನವನ್ನು ರೂಪಿಸಿಕೊಳ್ಳುತ್ತೇವೆ ಎಂಬುದು ಬಹಳ ದೊಡ್ಡ ವಿಷಯವಾಗಿದೆ ಎಂದರು.

ಕೃಷ್ಣರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಮೈಸೂರು ಕೃಷ್ಣಮೂರ್ತಿ ಮಾತನಾಡಿ, ಭಾರತ ದೇಶವು ತತ್ವಜ್ಞಾನಿಗಳ ತವರು, ಭಾರತ ದೇಶದಲ್ಲಿ ಹುಟ್ಟಿರುವಂತಹ ತತ್ವಜ್ಞಾನಿಗಳು ಬೇರೆಲ್ಲೂ ಹುಟ್ಟಿಲ್ಲ ಬೇರೆ ಬೇರೆ ಕಾಲಘಟ್ಟಗಳಲ್ಲಿ ಕಾಣಿಸಿಕೊಂಡಿರುವಂತಹ ತತ್ವಜ್ಞಾನಿಗಳು ಈ ದೇಶವನ್ನು ಕಟ್ಟಿ ಬೆಳೆಸುವುದಕ್ಕೆ ಕೊಟ್ಟಿರುವಂತಹ ಕೊಡುಗೆ ಅಪಾರವಾಗಿದೆ. ಅವರಲ್ಲಿ ವೇಮನ ನಂತಹ ಸರ್ವಜ್ಞರು ಕೂಡ ನಮ್ಮ ದೇಶಕ್ಕೆ ಅಪಾರವಾದಂತದ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.

ವೇಮನ ಅವರು ನಮಗೆ ವ್ಯಕ್ತಿ ಶೀಲವನ್ನು ಹೇಳಿಕೊಟ್ಟಿದ್ದಾರೆ, ಜೊತೆಗೆ ಸಮಾನತೆ ಮತ್ತು ಸತ್ಯ ಎಂಬ ಎರಡು ತತ್ವವನ್ನು ನೀಡಿದ್ದಾರೆ. ಎಲ್ಲಾ ಕಾಲವೂ, ಎಲ್ಲ ಸಮಾಜವು ನೆಮ್ಮದಿಯಿಂದ ಇರಲು ಈ ಎರಡು ತತ್ವಗಳು ಸಾಕು ಎಂದು ವೇಮನ ಅವರು ನಮಗೆ ತಿಳಿಸಿದ್ದಾರೆ ಇದಕ್ಕಿಂತ ನಮಗೆ ಇನ್ನೇನು ಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನದ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ. ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ. ಎಂ.ಡಿ ಸುದರ್ಶನ್, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಬಳಗದ ಅಧ್ಯಕ್ಷ ಡಾ. ಬಿ.ಎಂ ವಾಮದೇವ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Tags: