ಮೈಸೂರು : ಜಿಲ್ಲೆಯಲ್ಲಿ ಹುಲಿ ದಾಳಿ ಮುಂದುವರೆದಿದ್ದು, ಇದೀಗ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಸರಗೂರು ತಾಲ್ಲೂಕಿನ ಕೂಡುಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತ ವ್ಯಕ್ತಿಯನು ಗ್ರಾಮದ ದೊಡ್ಡನಿಂಗಯ್ಯ(65) ಎಂದು ಗುರುತಿಸಲಾಗಿದೆ.
ಇದನ್ನು ಓದಿ: ಹುಲಿ ದಾಳಿ | ಅಧಿಕಾರಿಗಳ ನಿರ್ಲಕ್ಷ್ಯವೇ ತಂದೆ ಸಾವಿಗೆ ಕಾರಣ, ತಪ್ಪಿತಸ್ಥರನ್ನು ಅಮಾನತುಗೊಳಿಸಿ
ಕಾಡಂಚಿನ ಜಮೀನಿನಲ್ಲಿ ಮೇಕೆ ಮೇಯಿಸುತ್ತಿದ್ದ ವೇಳೆ ಕಾಡಿಗೆ ಎಳೆದೊಯ್ದ ಹುಲಿ ದಾಳಿ ನಡೆಸಿದೆ. ಸ್ಥಳದಲ್ಲಿದ್ದ ಇಬ್ಬರಿಂದ ಕೂಗಾಟ ಚೀರಾಟವಾಗಿದ್ದು, ಜನರ ಕೂಗಾಟದಿಂದ ಶವ ಬಿಟ್ಟು ಹುಲಿ ಓಡಿ ಹೋಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಮೊನ್ನೆಯಷ್ಟೆ ಓರ್ವ ವ್ಯಕ್ತಿ ಹುಲಿ ದಾಳಿಗೆ ಬಲಿಯಾಗಿದ್ದ, ಹೀಗೆ ಹತ್ತು ದಿನದ ಅಂತರದಲ್ಲಿ ನಾಲ್ಕು ದಾಳಿಯಾಗಿವೆ.





