ಮೈಸೂರು: ಆರ್‌ಎಸ್‌ಎಸ್ ನಾಯಕರೇ ಮೋದಿಯನ್ನು ಕೆಳಗಿಳಿಸಬೇಕು ಎಂದುಕೊಂಡಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಪ್ಯುಲರಿಟಿ ಕಡಿಮೆಯಾಗಿದೆ. ದೇಶದಲ್ಲಿ ಬೆಲೆ ಏರಿಕೆ, ಕೋಮುವಾದದ ಮೂಲಕ ದೇಶದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ಮೋದಿ ಹೀಗೆ ಬಿಟ್ಟರೆ ಪಕ್ಷಕ್ಕೆ ಕಳಂಕ ಬರುತ್ತದೆ ಎಂದು ಮೋದಿಯನ್ನ ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವ ಯತ್ನ ಮಾಡುತ್ತಿದ್ದಾರೆ ಎಂದು ಅಚ್ಚರಿ ಹೇಳಿಕೆ ನೀಡಿದರು.
ಇದನ್ನೂ ಓದಿ:- ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ ನರೇಂದ್ರ ಮೋದಿ: ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ
ಇನ್ನು ಪರೀಕ್ಷೆ ವೇಳೆ ಜನಿವಾರ ಶಿವದಾರ ತೆಗೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ಬಿಜೆಪಿಯವರ ಸೃಷ್ಟಿ. ವಿಜಯೇಂದ್ರ ಪ್ರೇರಿತ ಸೃಷ್ಟಿ ಇದು.
ಇದರ ಬಗ್ಗೆ ನಿಜವಾದ ಅಂಶ ಗೊತ್ತಾಗಬೇಕಾದರೆ ಈ ವಿಚಾರವಾಗಿ ಉನ್ನತಮಟ್ಟದ ತನಿಖೆ ನಡೆಯಬೇಕು. ಆಗ ಸತ್ಯಾಂಶ ಹೊರ ಬರಲಿದೆ ಎಂದರು.





