Mysore
22
overcast clouds
Light
Dark

ಮೈಸೂರು: ಬೈಕ್‌ ಅಪಘಾತದಲ್ಲಿ ಇಬ್ಬರ ದುರ್ಮರಣ: ಹೆಲ್ಮೆಟ್‌ ಇದ್ದಿದ್ರೆ ಬದುಕಿರುತ್ತಿದ್ರು

 

ಮೈಸೂರು: ಚಾಲಕನ ನಿಯಂತ್ರಣ ಕಳೆದುಕೊಂಡ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಹಿಂಬದಿ ಸವಾರ ಮೃತಪಟ್ಟ ಘಟನೆ ನಗರದ ಮೇಟಗಳ್ಳಿ ಬಳಿ ನಡೆದಿದೆ.

ಬಿಎಂಶ್ರೀ ನಗರ ನಿವಾಸಿ ಚಂದ್ರಶೇಖರ್ ಎಂಬವರ ಪುತ್ರ ಸಚಿನ್(16) ಹಾಗೂ ಮಹದೇವ ಎಂಬವರ ಪುತ್ರ ಜನಾರ್ದನ್(25) ಎಂಬುವವರು ಅಪಘಾತದಲ್ಲಿ ಮೃತಪಟ್ಟವರು.

ಫ್ಲಂಬರ್ ಕೆಲಸ ಮಾಡುತ್ತಿದ್ದ ಜನಾರ್ದನ್ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಚಿನ್ ಅವರು ಶನಿವಾರ ತಡರಾತ್ರಿ ಯಮಹಾ ಬೈಕ್‌ನಲ್ಲಿ ಮೇಟಗಳ್ಳಿಯ ರಾಯಲ್ ಇನ್ ಜಂಕ್ಷನ್ ಕಡೆಯಿಂದ ಬಿಎಂಶ್ರೀ ನಗರಕ್ಕೆ ತೆರಳುತ್ತಿದ್ದರು. ಈ ವೇಳೆ ಜನಾರ್ದನ್ ಬೈಕ್ ಚಾಲನೆ ಮಾಡುತ್ತಿದ್ದರು.

ಈ ವೇಳೆ ಮೇಟಗಳ್ಳಿಯ ಜಿಲ್ಲಾಸ್ಪತ್ರೆ ಮುಂಭಾಗ ಬೈಕ್ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಹೀಗಾಗಿ ರಸ್ತೆ ಡಿವೈಡರ್‌ಗೆ ಗುದ್ದಿ ನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಸವಾರರಿಬ್ಬರೂ ಕೆಳಗೆ ಬಿದ್ದು ಇಬ್ಬರಿಗೂ ಗಂಭೀರ ಗಾಯಗಳಾಗಿವೆ. ಕೂಡಲೇ ಸಾರ್ವಜನಿಕರು ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲಿ ಮೃತಪಟ್ಟಿದ್ದರು.

ವಿಷಯ ತಿಳಿದ ವಿ.ವಿ.ಪುರಂ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹೆಲ್ಮೆಟ್ ಧರಿಸಿರಲಿಲ್ಲ: ದ್ವಿಚಕ್ರ ವಾಹನ ಚಾಲನೆ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಪೊಲೀಸರು ಪದೇ ಪದೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ. ಆದರೆ, ಚಾಲಕರು ವಾತ್ರ ಗಂಭೀರವಾಗಿ ಪರಿಗಣಿಸುವುದಿಲ್ಲ. ಶನಿವಾರ ರಾತ್ರಿ ನಡೆದ ಅಫಘಾತದಲ್ಲಿ ಸಾವನ್ನಪ್ಪಿದ ಸವಾರರಿಬ್ಬರು ಹೆಲ್ಮೆಟ್‌ ಧರಿಸಿದ್ದರೇ ಬದುಕಿರುತ್ತಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ