ಮೈಸೂರು : ಮೈಸೂರಿನ ಐತಿಹಾಸಿಕ ಚಲುವಾಂಬ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅವಧಿ ಮುಗಿದ ಆಹಾರ ಪದಾರ್ಥಗಳಿಂದ ತಯಾರಿಸಿದ ಆಹಾರಗಳನ್ನು ರೋಗಿಗಳಿಗೆ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇಂದು ಮೈಸೂರಿನ ಕೆ ಆರ್ ಆಸ್ಪತ್ರೆ ಹಾಗೂ ಚಲುವಾಂಬ ಆಸ್ಪತ್ರೆಗಳಿಗೆ ಭೇಟಿ ನೀಡಿದ ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ ಹೆಚ್ ಕೃಷ್ಣ ಹಾಗೂ ಅವರ ನಿಯೋಗ ನಗರದ ಕೆ ಆರ್ ಆಸ್ಪತ್ರೆ ಹಾಗೂ ಚಲುವಾಂಬ ಆಸ್ಪತ್ರೆಗೆ ದಿಡೀರ್ ಭೇಟಿ ನೀಡಿದ್ದು, ಆಸ್ಪತ್ರೆಯ ಸ್ವಚ್ಛತೆ ಹಾಗೂ ರೋಗಿಗಳಿಗೆ ನೀಡುವ ಆಹಾರದ ಗುಣಮಟ್ಟ ಪರಿಶೀಲಿಸುವ ವೇಳೆ ಚಲುವಾಂಬ ಆಸ್ಪತ್ರೆಯ ರೋಗಿಗಳಿಗೆ ಸರ್ಕಾರ ನೀಡುವ ಉಚಿತ ಆಹಾರಗಳನ್ನು ಅವಧಿ ಮುಗಿದ ರವೆ, ಅವಲಕ್ಕಿ, ಅಕ್ಕಿ ಹಾಗೂ ದ್ವಿದಳ ಧಾನ್ಯಗಳಿಂದ ತಯಾರಿಸಿ ರೋಗಿಗಳಿಗೆ ನೀಡುತ್ತಿರುವಾಗ ರಾಜ್ಯ ಆಹಾರ ಆಯೋಗಕ್ಕೆ ಸಿಕ್ಕಿ ಬಿದ್ದಿದ್ದಾರೆ. ನಿಯೋಗವು ಚಲುವಾಂಬ ಆಸ್ಪತ್ರೆಯ ಇಬ್ಬರು ಸಿಬ್ಬಂದಿ ಲೀಲಾವತಿ ಹಾಗೂ ಲಾರೆನ್ಸ್ ಎಂಬುವವರನ್ನು ಸಸ್ಪೆಂಡ್ ಮಾಡಿರುವುದಾಗಿ ತಿಳಿಸಿದ್ದಾರೆ.
ಆಸ್ಪತ್ರೆ ಪರಿಶೀಲನೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಯೋಗ ಅಧ್ಯಕ್ಷ ಡಾ ಹೆಚ್ ಕೃಷ್ಣ, ಕೆ ಆರ್ ಆಸ್ಪತ್ರೆ ಹಾಗೂ ಚಲುವಾಂಬ ಆಸ್ಪತ್ರೆ ಆವರಣದಲ್ಲಿ ಸ್ವಚ್ಛ ಕುಡಿಯುವ ನೀರೇ ಸಿಗುತ್ತಿಲ್ಲ ಹಾಗೂ ಆಸ್ಪತ್ರೆಯ ಆವರಣ ಸ್ವಚ್ಛತೆಯಿಂದಲೂ ಕಾಣುತ್ತಿಲ್ಲ, ಈಗಾಗಿ ಕೂಡಲೇ ಶುದ್ಧ ನೀರಿನ ಘಟಕ ತೆರೆಯಬೇಕು ಎಂದು ಕೆ ಆರ್ ಆಸ್ಪತ್ರೆಯ ಡೀನ್ ಡಾ ದಾಕ್ಷಾಯಿಣಿ ಅವರಿಗೆ ತಿಳಿಸಿದರು.
ರೋಗಿಗಳಿಗೆ ಮೆನುವಿನ ಪ್ರಕಾರ ಆಹಾರ ನೀಡುತ್ತಿಲ್ಲ ಬದಲಿಗೆ ಬೇಕಾಬಿಟ್ಟೆ ನೀಡುತ್ತಿದ್ದಾರೆ, ಇದರಿಂದ ರೋಗಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಳಿದೆ. ಕಳಪೆ ಆಹಾರ ನೀಡಿರುವ ಹಿನ್ನೆಲೆ ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿದ್ದು ಇದನ್ನು ಪರೀಕ್ಷೆಗೆಂದು ಲ್ಯಾಬ್ ಗೆ ಕಳುಹಿಸಲಾಗುವುದು. ವರದಿ ನಂತರ ಟೆಂಡರ್ದಾರರು ಹಾಗೂ ಆಡಳಿತ ಸಿಬ್ಬಂದಿಯ ಮೇಲೂ ಪ್ರಕರಣ ದಾಖಲಿಸುತ್ತೆವೆ ಎಂದರು.





