Mysore
21
few clouds

Social Media

ಸೋಮವಾರ, 17 ಫೆಬ್ರವರಿ 2025
Light
Dark

ಬ್ಯಾಂಕಿಂಗ್‌ ಹುದ್ದೆಗಳ ತರಬೇತಿ: ಜ.29ರಂದು ಉದ್ಘಾಟನೆ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಜ.೨೯ ರಂದು ಬೆಳಿಗ್ಗೆ ೧೧ಕ್ಕೆ ಕರಾಮುವಿ ಆವರಣದ ಕಾವೇರಿ ಸಭಾಂಗಣದಲ್ಲಿ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ ನಡೆಸಲಿರುವ ೪೫ ದಿನಗಳ ತರಬೇತಿ ಶಿಬಿರದ ಉದ್ಘಾಟನೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ತರಬೇತಿ ಶಿಬಿರ ಉದ್ಘಾಟಿಸುವರು. ಮೈಸೂರು ಜಿಲ್ಲಾ ಪೊಲೀಸ್ ಅಧಿಕ್ಷಕ ವಿಷ್ಣುವರ್ಧನ ಅವರು ಶಿಬಿರಾರ್ಥಿಗಳಿಗೆ ಶುಭಹಾರೈಸುವರು.

ಕರಾಮುವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅಧ್ಯಕ್ಷತೆವಹಿಸುವರು. ಕುಲಸಚಿವ ಪ್ರೊ. ಕೆ.ಬಿ. ಪ್ರವೀಣ ಉಪಸ್ಥಿತರಿರುವರು. ತರಬೇತಿಗೆ ಸೇರುವವರು ನೋಂದಾಯಿಸಲು ದೂ. ೦೮೨೧-೨೫೧೫೯೪೪, ಮೊ.೯೯೬೪೭ ೬೦೦೯೦ ಸಂಪರ್ಕಿಸಬಹುದು.

 

Tags: