Mysore
28
scattered clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಸಂಚಾರ ನಿಯಮ ಉಲ್ಲಂಘನೆ ದಂಡ : ಮೈಸೂರಲ್ಲಿ 29 ಕೋಟಿ ಸಂಗ್ರಹ

ಮೈಸೂರು : ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಶೇ.೫೦ರ ದಂಡ ಪಾವತಿಗೆ ಸರ್ಕಾರ ನೀಡಿದ್ದ ಅವಕಾವನ್ನು ಸದ್ಬಳಕೆ ಮಾಡಿಕೊಂಡಿರುವ ವಾಹನ ಸವಾರರು, ೧೯ ದಿನಗಳ ಅವಧಿಯಲ್ಲಿ ಬರೋಬ್ಬರಿ ೨೯.೯೭ ಕೋಟಿ ರೂ. ದಂಡ ಪಾವತಿಸಿದ್ದಾರೆ.

ರಾಜ್ಯ ಸರ್ಕಾರ ದಂಡ ಪಾವತಿಗೆ ಶೇ.೫೦ರಷ್ಟು ರಿಯಾಯಿತಿ ಘೋಷಣೆ ಮಾಡಿರುವುದಕ್ಕೆ ವಾಹನ ಸವಾರರು ಉತ್ತಮ ಪ್ರತಿಕ್ರಿಯೆ ನೀಡಿದ್ದು, ಅ.೧೨ರ ವರೆಗೆ ಒಟ್ಟು ೨೯,೯೭,೬೪,೦೩೦ ರೂ. ಸಂಗ್ರಹವಾಗಿದ್ದು, ಇದರಿಂದಾಗಿ ಒಟ್ಟು ೧೨,೭೦,೮೭೬ ಪ್ರಕರಣಗಳು ಇತ್ಯರ್ಥಗೊಂಡಂತಗಿದೆ.

ಸಂಚಾರ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣ ಇತ್ಯರ್ಥಪಡಿಸಲು ಸರ್ಕಾರ ಆ.೨೩ರಿಂದ ಸೆ.೧೨ರ ವರೆಗೆ ಶೇ.೫೦ ರಿಯಾಯಿತಿ ದಂಡ ಪಾವತಿಗೆ ಅವಕಾಶ ಮಾಡಿಕೊಟ್ಟಿತ್ತು. ಈ ಅವಕಾಶವನ್ನು ಬಳಸಿಕೊಂಡು ವಾಹನ ಚಾಲಕರು ದಂಡ ಪಾವತಿ ಮಾಡಿದ್ದಾರೆ.

ಸೀಟ್ ಬೆಲ್ಟ್ ಧರಿಸದೆ ಪ್ರಯಾಣ, ಪ್ರಯಾಣದ ಸಮಯದಲ್ಲಿ ಮೊಬೈಲ್ ಬಳಕೆ, ತ್ರಿಬಲ್ ರೈಡಿಂಗ್, ಹೆಲ್ಮೆಟ್ ರಹಿತ ಪ್ರಯಾಣ, ಸಂಚಾರ ನಿರ್ಬಂಧಿತ ರಸ್ತೆಯಲ್ಲಿ ಪ್ರಯಾಣ, ಸಿಗ್ನಲ್ ಜಂಪ್, ಅತಿ ವೇಗದ ಚಾಲನೆ ಮಾಡುವವರನ್ನು ಎಐ ಕ್ಯಾಮೆರಾ ಗುರುತಿಸುತ್ತಿದೆ. ಅದನ್ನು ಆಧರಿಸಿ ದಂಡ ವಿಧಿಸಲಾಗಿದೆ.

Tags:
error: Content is protected !!