ಮೈಸೂರು: ಬೇಸಿಗೆ ಆರಂಭವಾಗುತ್ತಿದ್ದಂತೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜಲಕ್ಷಾಮ ಎದುರಾಗಿದೆ.
ಬೆಂಗಳೂರಿಗೆ ನೀರು ಪೂರೈಕೆಯಾಗುವ ಕೆಆರ್‌ಎಸ್ ಹಾಗೂ ಹಳೆ ಮೈಸೂರು ಭಾಗದಲ್ಲಿ ಇರುವ ಪ್ರಮುಖ ಜಲಾಶಯವಾದ ಕಬಿನಿಯ ಇಂದಿನ ನೀರಿನ ಮಟ್ಟ ಈ ಕೆಳಕಂಡಂತಿದೆ.
ರೈತರ ಜೀವನಾಡಿಯಾಗಿರುವ ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯವು ಈ ಬಾರಿ ಉತ್ತಮ ಮಟ್ಟದಲ್ಲಿ ನೀರನ್ನು ತನ್ನಲ್ಲಿ ಶೇಖರಣೆ ಮಾಡಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಈ ಬಾರಿ ಬೇಸಿಗೆಯಲ್ಲಿ ಜಲಕ್ಷಾಮ ಕಾಣಿಸುವುದಿಲ್ಲ ಎಂದು ಅಂದಾಜು ಮಾಡಲಾಗಿದೆ.
124.80 ಅಡಿ ಸಾಮರ್ಥ್ಯವಿರುವ ಜಲಾಶಯದ ಇಂದಿನ ನೀರಿನ ಮಟ್ಟ 116.04 ಅಡಿಗಳಾಗಿದೆ. ಜಲಾಶಯದಿಂದ 4329 ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದ್ದು, ಹೊರಹರಿವು 156 ಕ್ಯೂಸೆಕ್ಸ್‌ಗಳಾಗಿದೆ.
ಇನ್ನು ಎಚ್.ಡಿ.ಕೋಟೆಯ ಕಬಿನಿ ಜಲಾಶಯದಲಿ ನೀರು ಸಮೃದ್ಧಿಯಾಗಿ ಬೇಸಿಗೆಯಲ್ಲೂ ತುಂಬಿದ್ದು, 84 ಅಡಿ ಸಾಮರ್ಥ್ಯವಿರುವ ಜಲಾಶಯದ ಇಂದಿನ ನೀರಿನ ಮಟ್ಟ 76.80 ಅಡಿಗಳಾಗಿದೆ. ಜಲಾಶಯದಿಂದ 1650 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದ್ದು, ಜಲಾಶಯಕ್ಕೆ ಕೇವಲ 74 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.