ಎಚ್.ಡಿ.ಕೋಟೆ: ಕಬಿನಿ ಕಾಡಿನಲ್ಲಿ ಹುಲಿ ಮರಿಗಳು ಮಣ್ಣಿನ ವಾಸನೆ ಸವಿದು ಮೈಮರೆತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ನೆಲ ತಂಪಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಲ್ಲಿ ಹಸಿರು ಚಿಗುರೊಡೆಯುತ್ತಿದ್ದು, ಪ್ರಾಣಿಗಳು ಸ್ವಚ್ಛಂದ ವಿಹಾರ ನಡೆಸುತ್ತಿವೆ.
ನಾಗರಹೊಳೆ ಅರಣ್ಯದಲ್ಲಿ ತಾಯಿಯೊಂದಿಗೆ ರಸ್ತೆಗಿಳಿದು ಬಂದ ಮರಿ ಹುಲಿಗಳು ಕಾಡಿನ ಮಣ್ಣಿನ ವಾಸನೆ ಸವಿದು ಮೈಮರೆತು ಕುಣಿದಾಡಿವೆ.
ಈ ದೃಶ್ಯ ಸಫಾರಿ ವೇಳೆ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮರಿಗಳ ತುಂಟಾಟದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.





