Mysore
15
few clouds

Social Media

ಗುರುವಾರ, 22 ಜನವರಿ 2026
Light
Dark

ಹುಲಿ ವಾಪಸ್‌ ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿ : ಒಬ್ಬಂಟಿಯಾಗಿ ಓಡಾಡದಂತೆ ಅರಣ್ಯ ಇಲಾಖೆ ಮನವಿ 

ಮೈಸೂರು : ರೈತರ ಜಮೀನು, ತೋಟಗಳು, ಗ್ರಾಮಗಳ ಗಡಿಭಾಗದಲ್ಲಿ ಕೂಂಬಿಂಗ್ ಕಾರ್ಯಚರಣೆ ನಡೆಸಿ ಹುಲಿಯನ್ನು ಸುರಕ್ಷಿತವಾಗಿ ಅರಣ್ಯಕ್ಕೆ ವಾಪಸ್ ಅಟ್ಟುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಹೋಬಳಿಯ ತಾರಕ, ಸತ್ತಿಗೆಹುಂಡಿ, ಪೆಂಜಹಳ್ಳಿ, ಹುಣಸೇಕುಪ್ಪೆ, ಸೋಗಹಳ್ಳಿ, ಕೆಂಪೇಗೌಡನಹುಂಡಿ, ಮಂಚೇಗೌಡನಹಳ್ಳಿ, ಹೊನ್ನಮ್ಮನಕಟ್ಟೆ, ಹೊಸಹೊಳಲು, ರಾಗಲಕುಪ್ಪೆ, ಮಗ್ಗೆ, ಮಳಲಿ, ಎನ್.ಬೆಳ್ತೂರು ಗ್ರಾಮಗಳ ವ್ಯಾಪ್ತಿಯಲ್ಲಿ ಹುಲಿಯು ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆಯು ಮೂರು ತಂಡಗಳನ್ನು ರಚಿಸಿ, ತಾರಕ ಶಾಖಾ ವ್ಯಾಪ್ತಿಯಲ್ಲಿ ಒಂದು ತಂಡ, ಉದ್ದೂರು ಶಾಖಾ ವ್ಯಾಪ್ತಿಯಲ್ಲಿ ಎರಡು ತಂಡಗಳನ್ನು ನೇಮಿಸಿಕೊಂಡು ವಲಯದ ಅರಣ್ಯದ ಹೊರ ಭಾಗದಲ್ಲಿ ರೈತರ ಜಮೀನು,ತೋಟಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ಕೈಗೊಳ್ಳುವುದರ ಮೂಲಕ ಹುಲಿಯನ್ನು ಸುರಕ್ಷಿತವಾಗಿ ವಾಪಸ್ ಅರಣ್ಯಕ್ಕೆ ಯಶಸ್ವಿಯಾಗಿ ಅಟ್ಟಲಾಗಿರುತ್ತದೆ.

ಇದನ್ನು ಓದಿ: ಮುಂದುವರೆದ ಹುಲಿ ದಾಳಿ;ರೈತ ಸಾವು : ರೊಚ್ಚಿಗೆದ್ದ ಗ್ರಾಮಸ್ಥರಿಂದ ಆರ್‌ಎಫ್‌ಓ ಮೇಲೆ ಹಲ್ಲೆ

ಮುಂದುವರಿದು ಇದೇ ರೀತಿ ಹುಲಿಯು ಪದೇ ಪದೇ ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ದೂರುಗಳು ಸ್ವೀಕೃತವಾಗುತ್ತಿದ್ದು, ಹೆಚ್ಚಿನ ಅನಾಹುತಗಳನ್ನು ತಪ್ಪಿಸುವ ಸಲುವಾಗಿ ವಲಯದ ಸಿಬ್ಬಂದಿಗಳನ್ನು ಪ್ರತಿದಿನ ರಾತ್ರಿ ಗಸ್ತು ಮಾಡಲು ಸಿಬ್ಬಂದಿಗಳ ತಂಡವನ್ನು ನೇಮಿಸಲಾಗಿರುತ್ತದೆ. ತಂಡವು ಪ್ರತಿದಿನ ಗಸ್ತು ಮಾಡುವ ಮೂಲಕ ನಿಗಾ ಇಡಲಾಗಿದ್ದು,ಅರಣ್ಯದಂಚಿನ ಗ್ರಾಮಗಳ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ರೈತರು, ಸಾರ್ವಜನಿಕರು,ಮಕ್ಕಳು ಎಚ್ಚರಿಕೆಯಿಂದ ಓಡಾಡುವುದು, ಒಬ್ಬಂಟಿಯಾಗಿ ಯಾರು ಓಡಾಡಬಾರದು ಎಂದು ಹೇಳಿದೆ.

ಅಂತರಸಂತೆ ವನ್ಯಜೀವಿ ವಲಯದ ರಿಂಗ್ ರಸ್ತೆಯಲ್ಲಿ ಬರುವ ತಾರಕ ಮತ್ತು ಉದ್ದೂರು ಅರಣ್ಯದಂಚಿನಲ್ಲಿರುವ ಗ್ರಾಮಗಳಲ್ಲಿ ಎರಡು ತಂಡಗಳನ್ನು ರಚಿಸಿದ್ದು, ಸತ್ತಿಗೆಹುಂಡಿ,ಪೆಂಜಹಳ್ಳಿ, ಹುಣಸೇಕುಪ್ಪೆ,ಸೋಗಹಳ್ಳಿ,ಹೊಸಮಾಳ, ಮಂಚೇಗೌಡನಹಳ್ಳಿ, ಹೊನ್ನಮ್ಮನಕಟ್ಟೆ, ಹೊಸಹೊಳಲು, ರಾಗಲಕುಪ್ಪೆ ಭಾಗಗಳಲ್ಲಿ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಡಿಸಿಎಫ್ ಪಿ.ಎ.ಸೀಮಾ ಹೇಳಿದ್ದಾರೆ. ‌

ಬಂಡೀಪುರ,ನಾಗರಹೊಳೆ ಹುಲಿ ಸಂರಕ್ಷಿತ ವ್ಯಾಪ್ತಿಯಲ್ಲಿ ಹುಲಿಗಳ ಉಪಟಳ ಹೆಚ್ಚಾಗಿರುವುದರಿಂದ ಹುಲಿ ಸಂರಕ್ಷಿತ ಪ್ರದೇಶಗಳ ವಲಯಗಳಲ್ಲಿ ಕ್ಷಿಪ್ರ ಕಾರ್ಯಪಡೆ ತಂಡ ರಚಿಸಿ, ಒಂದು ಇಲಾಖೆಯ ವಾಹನವನ್ನು ನಿಗದಿಪಡಿಸಿ ಗಸ್ತು ಮಾಡಲು ಹೇಳಲಾಗಿದೆ.

Tags:
error: Content is protected !!