Mysore
26
overcast clouds

Social Media

ಶನಿವಾರ, 11 ಏಪ್ರಿಲ 2026
Light
Dark

ದಮ್ಮನಕಟ್ಟೆ ಸಫಾರಿ ವೇಳೆ ಕಾಣಿಸಿಕೊಂಡ ಹುಲಿ: ಪ್ರವಾಸಿಗರು ಫುಲ್‌ ಖುಷ್‌

tiger dammanakante forest spot

ಮೈಸೂರು: ದಮ್ಮನಕಟ್ಟೆ ಸಫಾರಿ ವೇಳೆ ಪ್ರವಾಸಿಗರಿಗೆ ಹುಲಿಯೊಂದು ಕಾಣಿಸಿಕೊಂಡು ಮುದ ನೀಡಿದೆ.

ಕಬಿನಿ ಹಿನ್ನೀರು ಹಾಗೂ ಎಚ್.ಡಿ.ಕೋಟೆ ಪ್ರದೇಶಕ್ಕೆ ಹೊಂದಿಕೊಂಡಿರುವ ದಮ್ಮನಕಟ್ಟೆ ವನ್ಯಜೀವಿ ಸಫಾರಿ ತುಂಬಾ ಪ್ರಖ್ಯಾತಿ ಪಡೆದಿದೆ.

ಈ ಹಿನ್ನೆಲೆಯಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಭಾರೀ ಗಾತ್ರದ ಹುಲಿಯೊಂದು ದರ್ಶನ ನೀಡಿದ್ದು, ಪ್ರವಾಸಿಗರು ತಮ್ಮ ತಮ್ಮ ಮೊಬೈಲ್‌ ಕ್ಯಾಮರಾಗಳಲ್ಲಿ ಹುಲಿಯ ಓಡಾಟದ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.

ಹುಲಿ ಕಾಣಿಸಿಕೊಂಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌ ಆಗಿದ್ದು, ನೆಟ್ಟಿಗರು ಪ್ರಕೃತಿ ಸೌಂದರ್ಯ ಕುರಿತು ಹಾಗೂ ವನ್ಯಜೀವಿಗಳ ಕುರಿತು ವಿವಿಧ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ.

Tags:
error: Content is protected !!