Mysore
16
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಹುಲಿ ದರ್ಶನ : ಗ್ರಾಮಸ್ಥರಲ್ಲಿ ಆತಂಕ

ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ ಕೆರೆಯ ಸಮೀಪವಿರುವ ರೈತ ಕೆಂಪಯ್ಯ ಅವರ ತೋಟದ ಬಳಿ ಮಂಗಳವಾರ ಹುಲಿ ಕಾಣಿಸಿಕೊಂಡಿದ್ದು, ರೈತರು ಮತ್ತು ಜನಸಾಮಾನ್ಯರು ಆತಂಕಗೊಂಡಿದ್ದಾರೆ.

ಗ್ರಾಪಂ ಸದಸ್ಯ ಶಿವರಾಜ್ ಅವರು ರಸ್ತೆಯಲ್ಲಿ ಹೋಗುತ್ತಿದ್ದಾಗ ರೈತ ಕೆಂಪಯ್ಯ ತೋಟದ ಬಳಿ ಹುಲಿಯನ್ನು ನೋಡಿ, ಕಾಂಗ್ರೆಸ್ ಮುಖಂಡ ಕ್ಯಾತನಹಳ್ಳಿ ನಾಗರಾಜ್ ಅವರಿಗೆ ತಿಳಿಸಿದ್ದಾರೆ. ತಕ್ಷಣ ಅರಣ್ಯ ಅಧಿಕಾರಿ ರವಿಕುಮಾರ್ ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ, ಆ ಭಾಗದಲ್ಲಿ ಹುಲಿಯ ಚಲನವಲನಗಳನ್ನು ಪತ್ತೆ ಹಚ್ಚಿ, ಹುಲಿ ಓಡಾಡಿರುವುದನ್ನು ಖಚಿತಪಡಿಸಿಕೊಂಡು, ರೈತ ಕೆಂಪಯ್ಯ ತೋಟದಲ್ಲಿ ಕ್ಯಾಮೆರಾವನ್ನು ಅಳವಡಿಸಿದ್ದಾರೆ.

ಇದನ್ನು ಓದಿ: ಸಂವಿಧಾನ ಅರ್ಥೈಸಿಕೊಂಡಲ್ಲಿ ಕೋಮು ಸಂಘರ್ಷ ರಹಿತ ಸಮಾಜ ನಿರ್ಮಾಣ : ಪ್ರಾ. ಅಸ್ನಾ ಉರೂಜ್‌

ಈ ಭಾಗದಲ್ಲಿ ಹುಲಿಯ ಚಲನವಲನಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತಿನಲ್ಲಿದ್ದಾರೆ

ಡೇರಿ ಅಧ್ಯಕ್ಷ ಕೆ.ಪಿ.ಚಲುವರಾಜು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಮಚಂದ್ರಣ್ಣ, ಗುತ್ತಿಗೆದಾರ ಕೃಷ್ಣ, ಕೆ.ಡಿ.ಕೃಷ್ಣಮೂರ್ತಿ, ಮಡಿವಾಳ ಬೀರೇಶ್, ಪ್ರಸನ್ನ ಕುಮಾರ್, ಕೆ.ಟಿ.ಬಸಪ್ಪ, ರಾಜಕೀಯ ಕುಮಾರ, ಚಲುವ, ಕೆ.ಸಿ.ಬಸವರಾಜ್, ಚಂದು, ಮಹದೇವಣ್ಣ, ಅರಣ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

Tags:
error: Content is protected !!