ಹುಣಸೂರು : ಹನಗೋಡು ಹೋಬಳಿ ನಾಗಮಂಗಲ ಮತ್ತು ಮುತ್ತುರಾಯನಹೊಸಹಳ್ಳಿ ಭಾಗದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಈ ಸಂಬಂಧ ಅರಣ್ಯ ಇಲಾಖೆ ಬುಧವಾರ 30 ತಂಡದ ಸದಸ್ಯರೊಂದಿಗೆ ಕೊಂಬಿಂಗ್ ಆರಂಭಿಸಿದೆ.
ಹುಲಿ ಪ್ರತ್ಯಕ್ಷವಾಗಿರುವ ಸುದ್ದಿ ತಿಳಿಸಿದ ಸ್ಥಳೀಯರ ಮಾಹಿತಿ ಮೇಲೆ ಕಾರ್ಯಾಚರಣೆ ಆರಂಭಿಸಿದ್ದು, ಆನೆಚೌಕೂರು ಆನೆ ಕ್ಯಾಂಪ್‌ನಿಂದ ಏಕಲವ್ಯ, ಭೀಮ ಆನೆಯೊಂದಿಗೆ 30 ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದಾರೆ ಎಂದು ಎಸಿಎಫ್ ಲಕ್ಷ್ಮಿಕಾಂತ್ ತಿಳಿಸಿದರು.
ಥರ್ಮಲ್ ಡೋನ್
ಹುಲಿ ಕಾರ್ಯಾಚರಣೆಗೆ ಥರ್ಮಲ್ ಡೋನ್ ಬಳಸಿಕೊಳ್ಳಲು ಹಿರಿಯ ಅಧಿಕಾರಿಗಳ ಅನುಮತಿ ಕೋರಿದ್ದು, ರಾತ್ರಿ ಕಾರ್ಯಾಚರಣೆ ಸುಲಭವಾಗಲಿದೆ. ಕಾರ್ಯಾಚರಣೆಯಲ್ಲಿ ಹುಲಿ ಪತ್ತೆಯಾಗುತ್ತಿದ್ದಂತೆ ಸೆರೆ ಹಿಡಿಯಲು ಇಲಾಖೆ ಅಧಿಕಾರಿಗಳ ಅನುಮತಿ ಕೋರಿದ್ದೇವೆ ಎಂದರು.
ಮಾನವ ಶಕ್ತಿ ಬಳಸಿ ಗ್ರಾಮದ ಹೊಲ, ಗದ್ದೆ ಮತ್ತು ಕುರುಚಲು ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದು, ಎಲ್ಲಿಯೂ ಹುಲಿ ಕಂಡು ಬಂದಿಲ್ಲ ಎಂದರು.





