ಸರಗೂರು: ಸರಗೂರು ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ವ್ಯಕ್ತಿಯನ್ನು ಕೊಂದಿದ್ದ ತಾಯಿ ಹುಲಿ ಕಳೆದ ರಾತ್ರಿ ಸೆರೆಯಾಗಿದೆ.
ನಾಲ್ಕು ಮರಿಗಳಿಗೆ ಜನ್ಮ ನೀಡಿ ವ್ಯಕ್ತಿಯನ್ನು ಕೊಂದು ಹಾಕಿದ್ದ ಹುಲಿ, ಒಂದು ತಿಂಗಳಿನಿಂದಲೂ ಅರಣ್ಯ ಇಲಾಖೆಯವರನ್ನು ಸತಾಯಿಸಿತ್ತು.
ಇದನ್ನು ಓದಿ: ಹುಲಿ ದಾಳಿಯಿಂದ ಬಚಾವಾಗಲು ಮುಖವಾಡದ ಮೊರೆ!
ಪ್ರಾರಂಭದಲ್ಲಿ ಎರಡು ಮರಿಗಳನ್ನು ಸೆರೆ ಹಿಡಿಯಲಾಗಿತ್ತು. ಕಳೆದ ಮಧ್ಯರಾತ್ರಿ ಹುಲಿ ಸ್ಥಳವನ್ನು ಬಿಟ್ಟು ಹೊರ ಬರುವುದನ್ನೇ ಕಾಯುತ್ತಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ನಾಲ್ಕು ಆನೆಗಳು, ಅರವಳಿಕೆ ತಜ್ಞರು, ಸುಮಾರು 30ಕ್ಕೂ ಹೆಚ್ಚು ಸಿಬ್ಬಂದಿಗಳು ತೀವ್ರ ಕಾರ್ಯಾಚರಣೆ ನಡೆಸಿ ಹೊಸಬೀರ್ವಾಳು ಗ್ರಾಮದ ಜಮೀನೊಂದರಲ್ಲಿ ಹುಲಿಯನ್ನು ಸೆರೆ ಹಿಡಿಯುವ ಮೂಲಕ ಯಶಸ್ವಿಯಾಗಿದ್ದಾರೆ.
ಸೆರೆಗೊಂಡ ಹುಲಿಯನ್ನು ಮತ್ತು ಮರಿಗಳನ್ನು ಒಟ್ಟುಗೂಡಿಸಿ ಬ್ನನೇರುಘಟ್ಟ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡುವುದಾಗಿ ಅರಣ್ಯ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.





