ಮೈಸೂರು : ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿ ಮುಂದುವರೆದಿದ್ದು, ಜಿಲ್ಲೆಯ ಸರಗೂರು ತಾಲೂಕಿನ ಹೆಗ್ಗೂಡಿಲು ಗ್ರಾಮದಲ್ಲಿ ಬಳಿ ವ್ಯಾಘ್ರ ದಾಳಿಗೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾನೆ.
ಮೃತ ವ್ಯಕ್ತಿಯನ್ನು ದಂಡನಾಯಕ (52) ಎಂದು ಗುರುತಿಸಲಾಗಿದ್ದು, ಜಮೀನಿಗೆ ತೆರಳುತ್ತಿದ್ದ ವೇಳೆ ರೈತನ ಮೇಲೆ ಏಕಾಏಕಿ ಹುಲಿ ದಾಳಿ ನಡೆಸಿದೆ ಎನ್ನಲಾಗಿದೆ. ರೈತನ ತೊಡೆ, ತಲೆ ಭಾಗದ ಮೇಲೆ ದಾಳಿ ನಡೆಸಿದೆ.
ಒಂದು ತಿಂಗಳ ಅಂತರದಲ್ಲಿ ಹುಲಿ ದಾಳಿಗೆ ನಾಲ್ಕು ಸಾವಾಗಿದ್ದು, ನಿರಂತರ ಹುಲಿ ದಾಳಿಗೆ ಕಾಡಂಚಿನ ಜನರು ಬೆಚ್ಚಿ ಬಿದ್ದಿದ್ದಾರೆ.





