ಮೈಸೂರು : ಜಿಲ್ಲೆಯಲ್ಲಿ ಹುಲಿ ಮುಂದುವರೆದಿದ್ದು, ದಾಳಿಗೆ ಮತ್ತೊಬ್ಬ ರೈತ ಬಲಿಯಾಗಿದ್ದಾನೆ. ಹೀಗಾಗಿ ರೊಚ್ಚಿಗೆದ್ದ ಕಾಡಂಚಿನ ಗ್ರಾಮಸ್ಥರು ಆರ್‌ಎಫ್‌ಒ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಹೆಗ್ಗೂಡಿಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೈತ ದಂಡನಾಯಕ ಶುಕ್ರವಾರ ಬೆಳಿಗ್ಗೆ ಹುಲಿದಾಳಿಗೆ ಮೃತಪಟ್ಟಿದ್ದಾನೆ. ದಂಡ ನಾಯಕ ಜಮೀನಿಗೆ ತೆರಳುತ್ತಿದ್ದ ವೇಳೆ ಹುಲಿ ದಾಳಿ ನಡೆಸಿದ್ದು ದಂಡ ನಾಯಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಹುಲಿ ದಾಳಿ ತಡೆಯಲು ಅರಣ್ಯ ಇಲಾಖೆ ವಿಫಲ ಹಿನ್ನಲೆ ಘಟನೆ ಸ್ಥಳಕ್ಕೆ ತೆರಳಿದ್ದ ಆರ್.ಎಫ್.ಒ ಅಮೃತಾ ಅವರ ಮೇಲೆ ಗ್ರಾಮಸ್ಥರು ಆಕ್ರೋಶ ಹೊರಹಾಕಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸ್ಥಳೀಯರಿಂದ RFO ಮೇಲಿನ ಹಲ್ಲೆಯನ್ನು ಸ್ಥಳದಲ್ಲಿದ್ದ ಅರಣ್ಯ ಅಧಿಕಾರಿಗಳು ತಡೆದಿದ್ದಾರೆ. ಸ್ಥಳದಲ್ಲಿ ಹುಲಿ ಸೆರೆಗೆ ಆಗ್ರಹಿಸಿ ಆಕ್ರೋಶ ಮುಂದುವರೆದಿದೆ.





