ಸರಗೂರು : ಹುಲಿ ದಾಳಿ ನಡೆಸಿ ರೈತನ ಬಲಿ ಪಡೆದ ಮುಳ್ಳೂರು ಗ್ರಾಮಕ್ಕೆ ಶಾಸಕ ಅನಿಲ್ ಚಿಕ್ಕಮಾದು ಭೇಟಿ ಕೊಟ್ಟಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಬಾರದ ಹಿನ್ನಲೆ ಅಸಮಾಧಾನ ವ್ಯಕ್ತವಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳಿಗೆ ಫೋನಾಯಿಸಿದ ಅನಿಲ್ ಚಿಕ್ಕಮಾದು ಅಸಮಧಾನ ವ್ಯಕ್ತಪಡಿಸಿದ್ದಾರೆ. ನಾನು ಬಂದು ಅರ್ಧ ಗಂಟೆ ಆದ್ರೂ ನೀವು ಬಂದಿಲ್ಲ ಕಾರಣ ಏನು..? ಈ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಲು ಸಭೆ ನಡೆಸೋಣವೆಂದರೆ ನೀವೇ ಬಂದಿಲ್ಲ. ಇದಕ್ಕೆ ಕಾರಣವಾದ್ರೂ ಏನು ಎಂದು ಶಾಸಕರು ತಮ್ಮ ಅಸಹಾಯಕತೆ ತೋರಿಸಿಕೊಂಡಿದ್ದಾರೆ.
ಇದನ್ನು ಓದಿ: ಸರಗೂರು| ಹುಲಿ ದಾಳಿಗೆ ವ್ಯಕ್ತಿ ಬಲಿ
ಪರಿಹಾರ ನೀಡುವ ಬಗ್ಗೆ ಅಧಿಕಾರಿ ತಿಳಿಸಿದಾಗ ಅನಿಲ್ ಚಿಕ್ಕಮಾದು ಮೃದುವಾಗೇ ಅಧಿಕಾರಿಗೆ ಕ್ಲಾಸ್ ತಗೊಂಡಿದ್ದಾರೆ. ಕಳೆದ ವಾರ ಹುಲಿ ಹೆಜ್ಜೆ ಕಾಣಿಸಿಕೊಂಡ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ರೂ ಕ್ರಮ ಕೈಗೊಂಡಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. ಶಾಸಕರ ಯಾವೊಂದು ಪ್ರಶ್ನೆಗೂ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಅಧಿಕಾರಿಯಿಂದ ಸಮರ್ಪಕ ಉತ್ತರ ದೊರೆಯಲಿಲ್ಲ. ಜನಪ್ರತಿನಿಧಿಯ ಪರಿಸ್ಥಿತಿಯೇ ಹೀಗಾದ್ರೆ ಸಾಮಾನ್ಯ ರೈತನ ಪಾಡೇನು.?





