ಅಪ್ರಾಪ್ತ ಸೇರಿ ಮೂವರು ಅಂದರ್…ಮಾರಕಾಸ್ತ್ರಗಳು ವಶ…ಶೋಕಿಗಾಗಿ ಕಳ್ಳತನ ಮಾರ್ಗ…!!
ನಂಜನಗೂಡು : ಒಂದೇ ರಾತ್ರಿಯಲ್ಲಿ ಮೂರು ಅಂಗಡಿಗಳಿಗೆ ಕನ್ನ ಹಾಕಿ ತಪ್ಪಿಸಿಕೊಳ್ಳಲು ಯತ್ನಿಸಿದ ಮೂವರು ಕಳ್ಳರನ್ನ ರೆಡ್ ಹ್ಯಾಂಡಾಗಿ ಹಿಡಿಯುವಲ್ಲಿ ಹುಲ್ಲಹಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂವರ ಪೈಕಿ ಓರ್ವ ಅಪ್ರಾಪ್ತ ಸೆರೆಯಾಗಿದ್ದಾನೆ. ಬಂಧಿತರ ಬಳಿ ಮಾರಕಾಸ್ತ್ರಗಳು ದೊರೆತಿದೆ. ಗ್ರಾಮಸ್ಥರು ನೀಡಿದ ಮಾಹಿತಿ ಪೊಲೀಸರಿಗೆ ನೆರವಾಗಿದೆ.
ಇದನ್ನು ಓದಿ: ಮೈಸೂರು | ಕಾರಿನ ಗಾಜು ಒಡೆದು 48 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು ; ದೂರು ದಾಖಲು
ನಂಜನಗೂಡು ತಾಲ್ಲೂಕಿನ ಹೆಡಿಯಾಲ ಗ್ರಾಮದಲ್ಲಿ ತಡರಾತ್ರಿ ಬಸ್ ನಿಲ್ದಾಣದ ಸಮೀಪವೇ ಇರುವ ದಿನಸಿ ಅಂಗಡಿ ಕಬ್ಬಿಣದ ಅಂಗಡಿ ಹಾಗೂ ಗ್ರಾಮದ ವರವಲಯದಲ್ಲಿರುವ ಮದ್ಯದ ಅಂಗಡಿ ಬೀಗ ಮುರಿದ ಖದೀಮರು ಕಳ್ಳತನ ಮಾಡಿದ್ದಾರೆ. ದಿನಸಿ ಅಂಗಡಿಯಲ್ಲಿ ಎಪ್ಪತ್ತು ಸಾವಿರ ನಗದು. ಕಬ್ಬಿಣದ ಅಂಗಡಿ ಬೀಗ ಮುರಿದರೂ ಹಣ ದೊರೆತಿಲ್ಲ. ಮದ್ಯದ ಅಂಗಡಿ ಬೀಗ ಮುರಿಯುತ್ತಿದ್ದ ವೇಳೆ ಬಾರಿ ಶಬ್ದ ಬಂದ ಕಾರಣ ಜಮೀನಿನಲ್ಲಿ ಕಾವಲು ಕಾಯುತ್ತಿದ್ದ ರೈತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲರ್ಟ್ ಆದಾ ಹುಲ್ಲಹಳ್ಳಿ ಠಾಣೆ ಪಿಎಸ್ಐ ಚೇತನ್ ಕುಮಾರ್ ನೇತೃತ್ವದ ಸಿಬ್ಬಂದಿಗಳು ಗ್ರಾಮಸ್ಥರ ನೆರವಿನಿಂದ ಸುತ್ತುವರೆದು ಮೂರು ಖದೀಮರನ್ನು ಸೆರೆ ಹಿಡಿದಿದ್ದಾರೆ. ಮಾರಕಸ್ತ್ರಗಳ ಮೂಲಕ ಬೆದರಿಸಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಪಿಎಸ್ಐ ಚೇತನ್ ಕುಮಾರ್ ಮತ್ತೆ ಸಿಬ್ಬಂದಿಗಳು ರೈತರ ಜೊತೆಗೂಡಿ ಬೆನ್ನತ್ತಿ ಮೂವರು ಖದೀಮರನ್ನು ಸೆರೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರತಾಪ್( 21) ಮಹಾಲಿಂಗ (35) ಹಾಗೂ 17 ವರ್ಷದ ಅಪ್ರಾಪ್ತ ಬಾಲಕ ಸೇರಿ ಮೂವರನ್ನ ವಶಕ್ಕೆ ಪಡೆದಿದ್ದಾರೆ. ಶೋಕಿಗಾಗಿ ಕಳ್ಳತನದ ಮಾರ್ಗ ಹಿಡಿದಿರುವುದು ವಿಚಾರಣೆ ವೇಳೆ ಬಯಲಾಗಿದೆ. ಈ ಸಂಬಂಧ ಹುಲ್ಲಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





