Mysore
23
clear sky

Social Media

ಶನಿವಾರ, 24 ಜನವರಿ 2026
Light
Dark

ದೇಶದಲ್ಲೇ ಮೊದಲ ಬಾರಿಗೆ QR ಕೋಡ್ ಅಳವಡಿಸಿದ ಮೊಟ್ಟಮೊದಲ ನಗರಸಭೆ ಇದು

ಕ್ಯೂ ಆರ್ ಕೋಡ್ ಬೋರ್ಡ್ ಉದ್ಘಾಟಿಸಿದ ಶಾಸಕ ದರ್ಶನ್ ಧ್ರುವನಾರಾಯಣ್ 

ನಂಜನಗೂಡು : ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ನಗರದ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ಯೂಆರ್ ಕೋಡ್ ಅಳವಡಿಸಿದ ಮೊಟ್ಟಮೊದಲ ನಗರಸಭೆ ನಂಜನಗೂಡು ಆಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.

ನಂಜನಗೂಡು ನಗರಸಭಾ ವತಿಯಿಂದ ನಗರಸಭೆ ಆವರಣದಲ್ಲಿ ಶುಕ್ರವಾರ 31 ವಾರ್ಡ್ ಗಳಿಗೆ ಸಂಬಂಧಿಸಿದಂತೆ ಕ್ಯೂ ಆರ್ ಕೋಡ್ ಬೋರ್ಡ್ ಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ನಂಜನಗೂಡು ನಗರಕ್ಕೆ ಸಂತಸವಾಗಿದೆ. ಭಾರತ ದೇಶದಲ್ಲಿ ಮೊದಲನೆಯ ಕ್ಯೂ ಆರ್ ಕೋಡ್ ನಗರಸಭೆ ಎಂದು ರಾಜ್ಯದ ಇತಿಹಾಸದಲ್ಲಿ ಸೇರ್ಪಡೆಯಾಗುತ್ತಿದೆ. ಇಂತಹ ವ್ಯವಸ್ಥೆ ದೇಶದ ಮಹಾನಗರ ಪಾಲಿಕೆಗಳಲ್ಲಿ ಮಾತ್ರ ಅಳವಡಿಸಲಾಗುತ್ತಿತ್ತು. ಪುರಸಭೆ ಮತ್ತು ನಗರಸಭೆಗಳಿಗೆ ದೇಶದ ಯಾವುದೇ ಭಾಗದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿರಲಿಲ್ಲ. ಅಶೋಕ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ನಂಜನಗೂಡಿನ ಪ್ರತಿ ವಾರ್ಡ್ನ ನಾಗರಿಕರಿಗೆ ಈ ಸೌಲಭ್ಯ ಸಹಕಾರಿಯಾಗಲಿದೆ ಎಂದರು.

ನಗರಸಭೆ ಅಧಿಕಾರಿಗಳು ಹಾಗೂ ನಾಗರೀಕರನ್ನು ನಿರಂತರ ಸಂಪರ್ಕದಲ್ಲಿಟ್ಟುಕೊಂಡು ಸರಿಯಾದ ರೀತಿಯಲ್ಲಿ ನಗರದ ಕೆಲಸ ಮಾಡಲು ಬಹಳ ಅನುಕೂಲವಾಗಿದೆ. ನಗರ ವ್ಯಾಪಕವಾಗಿ ಅಭಿವೃದ್ಧಿಯಾಗುತ್ತಿದೆ. ಕೈಗಾರಿಕೆಗಳು, ಶೈಕ್ಷಣಿಕ ಸಂಸ್ಥೆಗಳು ನಂಜನಗೂಡಿನಲ್ಲಿ ಬೆಳೆಯುತ್ತಿವೆ. ದೇಶ ವಿದೇಶ ಸೇರಿದಂತೆ ಬೇರೆ ಬೇರೆ ಪ್ರದೇಶಗಳಿಂದ ಇಲ್ಲಿ ಬಂದು ಬಂಡವಾಳ ಹೂಡುತ್ತಿದ್ದಾರೆ. ಇಂತಹ ತಂತ್ರಜ್ಞಾನವನ್ನು ಬಳಕೆ ಮಾಡಿ ಮತ್ತಷ್ಟು ಉನ್ನತಿ ಕಳುಹಿಸುವ ಯೋಜನೆ ಇದಾಗಿದ್ದು, ಈಗಾಗಲೇ ಮುಖ್ಯಮಂತ್ರಿಯವರು ನಗರದ ಅಭಿವೃದ್ಧಿಗೆ ಸುಮಾರು 50 ಕೋಟಿ ಅನುದಾನ ಬಿಡುಗಡೆ ಮಾಡಿದ್ದು ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದರು.

ನಂತರ ಅಶೋಕ ವಿಶ್ವವಿದ್ಯಾಲಯದ ಪರಿಕಲ್ಪನಾ ಮುಖ್ಯಸ್ಥೆ ಐಶ್ವರ್ಯ ಸುನಾದ್ ಮಾತನಾಡಿ, ಮುಂದಿನ ಹತ್ತು ವರ್ಷ ಮುಖ್ಯ ಸಮಯ ಇದಾಗಿದೆ. ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ನಗರಗಳನ್ನು ಸುಧಾರಣೆ ಮಾಡಲು ಈ ಯೋಜನೆ ಬಹಳ ಅನುಕೂಲವಾಗಿದೆ. ನಾಗರಿಕರು ತಮ್ಮ ವಾರ್ಡ್ಗಳಲ್ಲಿ ಸಮಸ್ಯೆ ಕಂಡು ಬಂದರೆ ಏನು ಮಾಡಬೇಕು ಎಂಬುದನ್ನು ಸ್ಕ್ಯಾನ್ ಮಾಡಿ ನಂತರ ತಿಳಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ, ಅಧ್ಯಕ್ಷ ಶ್ರೀಕಂಠ ಸ್ವಾಮಿ, ರೆಹನಾ ಬಾನು, ಮೈತ್ರಾದೇವಿ, ಹೇಮಂತ್ ಕುಮಾರ್ ಸೇರಿದಂತೆ ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Tags:
error: Content is protected !!