ಮೈಸೂರು: ಸತತ ಒಂದು ತಿಂಗಳು ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಅಪ್ರಾಪ್ತರು ಸೇರಿದಂತೆ 10 ಸರಗಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ಅರ್ಧ ಕೋಟಿ ರೂ. ಮೌಲ್ಯದ 1 ಕೆಜಿ ತೂಕದ 25 ಚಿನ್ನದ ಸರ, ಚಿನ್ನಾಭರಣಗಳು, 9 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಮನೆ ಕಳ್ಳತನ ಪ್ರಕರಣದಲ್ಲಿ ಈ ಹಿಂದೆಯೂ ಭಾಗಿಯಾಗಿದ್ದ ವ್ಯಕ್ತಿಯನ್ನು ಬಂಧಿಸಿ, ಆತನಿಂದ 70 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ,
”ಮನೆ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿರುವ ಆರು ಮಂದಿಯಲ್ಲಿ ವಕೀಲರೊಬ್ಬರೂ ಇದ್ದಾರೆ. ಮನೆ ಕಳ್ಳತನ ನಡೆಸುತ್ತಿದ್ದ ಖದೀಮರಿಗೆ ಸಹಕಾರ ನೀಡುತ್ತಿದ್ದ ವಕೀಲರನ್ನು ಸಹ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕದ್ದ ಮಾಲನ್ನು ಮಾರಾಟಕ್ಕೆ ವ್ಯವಸ್ಥೆ ಮಾಡುತ್ತಿದ್ದಲ್ಲದೇ ಬಂಧನವಾದರೆ ಜಾಮೀನು ಕೊಡಿಸುವ ಮೂಲಕ ಸಹಕಾರ ನೀಡುತ್ತಿದ್ದರು,” ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದರು.
ಸಿಬ್ಬಂದಿಗಳಾದ ಯು.ಉಮೇಶ್, ಸಲೀಂಖಾನ್, ರಾಮಸ್ವಾಮಿ, ಯಾಕೂಬ್ ಷರೀಫ್, ಸಿ.ಚಿಕ್ಕಣ್ಣ, ಎ.ಉಮಾಮಹೇಶ, ಪಿ.ಎನ್. ಲಕ್ಷ್ಮೇಕಾಂತ, ಆನಂದ, ಪ್ರಕಾಶ್, ಸಿ.ಎನ್. ಶಿವರಾಜು, ಚಂದ್ರಶೇಖರ, ಗೋವಿಂದ, ಮಧುಸೂದನ, ಮೋಹನಾರಾಧ್ಯ, ಕೆ.ಮಹೇಶ್, ನರಸಿಂಹ ರಾಜು, ನಬೀ ಪಟೇಲ್, ಪವನ್, ಜಿ.ಆರ್. ಮಮತ, ಎಂ.ಎಂ.ರಮ್ಯಾ, ಗೌತಮ್, ಶಿವಕುಮಾರ್ ಇದ್ದರು.





