Mysore
22
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಅಂತರಾಷ್ಟ್ರೀಯ ಈಜುಕೂಟಕ್ಕೆ ಆಯ್ಕೆಯಾದ ಮೈಸೂರಿನ ತಾನ್ಯ

ಮೈಸೂರು: ದೆಹಲಿಯ ಎಸ್.ಪಿ. ಮುಖರ್ಜಿ ಕ್ರೀಡಾಂಗಣದಲ್ಲಿ ಫೆ.7 ರಿಂದ 13ರವರೆಗೆ ನಡೆಯಲಿರುವ ಬಿಐಎಂಎಸ್ಟಿಇಸಿ ಅಂತರಾಷ್ಟ್ರೀಯ ಈಜು ಚಾಂಪಿಯನ್‌ ಶಿಪ್‌ನಲ್ಲಿ ಮೈಸೂರಿನ ತಾನ್ಯ ಭಾರತದ ಪರವಾಗಿ ಪ್ರತಿನಿಧಿಸಲಿದ್ದಾರೆ.

ಈ ಸ್ಪರ್ಧೆಗೆ ಆಯ್ಕೆಯಾದ ಮೈಸೂರಿನ ಪ್ರಥಮ ಈಜುಪಟು ಎಂಬ ಹಿರಿಮೆ ಇವರು ಭಾಜನರಾಗಿದ್ದಾರೆ.

ಸ್ಪರ್ಧೆಯಲ್ಲಿ 7 ದೇಶಗಳಿಂದ 14ರಿಂದ 20ನೇ ವಯಸ್ಸಿನೊಳಗೆ ಈಜುಪಟುಗಳು ಸ್ಪರ್ಧಿಸಲಿದ್ದು, 14ನೇ ವಯಸ್ಸಿನ ತಾನ್ಯಾ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, ಅತ್ಯಂತ ಕಿರಿಯ ವಯಸ್ಸಿನ ಈಜುಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈಜು ಚಾಂಪಿಯನ್‌ ಶಿಪ್‌ನಲ್ಲಿ 400 ಮೀ. ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ ತಾನ್ಯ ಸ್ಪರ್ಧಿಸಲಿದ್ದಾರೆ.

ನಗರದ ಜೆ.ಪಿ ನಗರ ಗ್ಲೋಬಲ್ ಸ್ಪೋರ್ಟ್ಸ್‌ನ ಪವನ್ ಕುಮಾರ್ ಅವರಿಂದ ತಾನ್ಯ ತರಬೇತಿಯನ್ನು ಪಡೆಯುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!