ಟಿ.ನರಸೀಪುರ: ಆಸ್ತಿಗಾಗಿ ಸಹೋದರಿಯರು ಕಿರುಕುಳ ನೀಡಿದ ಪರಿಣಾಮ ಸಹೋದರ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ ನಡೆದಿದೆ.
55 ವರ್ಷದ ಲಕ್ಷ್ಮೀಕಾಂತ್ ಎಂಬುವವರೇ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಯಾಗಿದ್ದಾರೆ. ಎರಡು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆಸ್ತಿಯಲ್ಲಿ ಪಾಲು ಬೇಕೆಂದು ಸಹೋದರಿಯರು ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಬೇಸತ್ತ ಲಕ್ಷ್ಮೀಕಾಂತ್ ಅವರು, ನನ್ನ ಸಾವಿಗೆ ಸಹೋದರಿಯರಾದ ದ್ರಾಕ್ಷಾಯಿಣಿ, ನಳಿನಿ, ಭಾವಂದಿರಾದ ದಾಸೇಗೌಡ, ನಾರಾಯಣಗೌಡ ಕಾರಣವೆಂದು ವಿಡಿಯೋ ಮಾಡಿ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನೂ ಓದಿ:-ಓದುಗರ ಪತ್ರ: ಪೊಲೀಸರಿಗೆ ಹೊಸ ಮಾದರಿಯ ಟೋಪಿ
ಮೈಸೂರಿನಲ್ಲಿ ನೆಲೆಸಿದ್ದ ಲಕ್ಷ್ಮೀಕಾಂತ್ ಕುಟುಂಬ ಸಹೋದರಿಯರ ಕಿರುಕುಳದಿಂದ ಬೇಸತ್ತು ತಲಕಾಡಿನ ಜಮೀನಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





