Mysore
23
scattered clouds

Social Media

ಶುಕ್ರವಾರ, 11 ಜುಲೈ 2025
Light
Dark

ಮತ್ತೊಮ್ಮೆ ಮೋದಿಗಾಗಿ ನನ್ನ ಬೆಂಬಲಿಸಿ: ಯದುವೀರ್‌

ಮೈಸೂರು: ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ದೇಶದ ಪ್ರಧಾನಿ ಮಾಡಲು ನೀವು ನನ್ನನ್ನು ಬೆಂಬಲಿಸಬೇಕು ಎಂದು ಮೈಸೂರು-ಕೊಡಗು ಲೋಕಸಭಾ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮನವಿ ಮಾಡಿದರು.

ಸರಸ್ವತಿಪುರಂನಲ್ಲಿರುವ ರಾಜ್ಯ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಎಂ.ಅಪ್ಪಣ್ಣ ಅವರ ಕಚೇರಿಗೆ ಬಿಜೆಪಿ ಮುಖಂಡರೊಂದಿಗೆ ಭೇಟಿ ನೀಡಿ ಬೆಂಬಲ ಕೋರಿದರು.

ಅರಮನೆಗೂ ನಾಯಕ ಸಮುದಾಯದವರಿಗೂ ಅವಿನಭಾವ ಸಂಬಂಧವಿದೆ. ಮಹಾರಾಜರ ಕಾಲದಿಂದಲೂ ಅರಮನೆಯವರಿಗೆ ಬೆಂಬಲ ನೀಡುತ್ತಲೇ ಬಂದಿದ್ದೀರಿ. ಈ ಬಾರಿ ನಾನು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿದ್ದೇನೆ. ಎಲ್ಲರೂ ಸಹಕಾರ ನೀಡಬೇಕು ಎಂದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ ರಾಜೇಂದ್ರ, ಚುನಾವಣಾ ಸಂಚಾಲಕ ಮೈ.ವಿ ರವಿಶಂಂಕರ್‌, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಎಲ್‌.ಆರ್‌ ಮಹದೇವಸ್ವಾಮಿ, ಮುಖಂಡರಾದ ಎಸ್‌ ಮಹದೇವಯ್ಯ, ಶಬರೀಶ್‌, ಮಹೇಶ್‌, ವಸಂತಕುಮಾರ್‌, ಪ್ರಭಾಕರ್‌, ರಾಜು, ಸುರೇಶ್‌, ನಾಗೇಂದ್ರ ಹಾಗೂ ನಾಯಕ ಸಮಾಜದ ಮುಖಂಡರು ಹಾಜರಿದ್ದರು

Tags:
error: Content is protected !!