Mysore
24
light rain

Social Media

ಬುಧವಾರ, 16 ಜುಲೈ 2025
Light
Dark

ರಾಜಕೀಯ ಕ್ಷೇತ್ರದಲ್ಲಿ ಧೃವತಾರೆಯಾಗಿ ಸೇವೆ ಸಲ್ಲಿಸದವರು ಶ್ರೀನಿವಾಸ ಪ್ರಸಾದ್‌ : ಸುತ್ತೂರು ಶ್ರೀ

ಮೈಸೂರು : ಶೋಷಣೆಗಳ ವಿರುದ್ಧ ಯಾವುದೇ ಸಂಕೋಚವಿಲ್ಲದೆ ಧ್ವನಿ ಎತ್ತುತ್ತಿದ್ದ ಪರೂಪದ ರಾಜಕಾರಣಿ ವಿ.ಶ್ರೀನಿವಾಸ ಪ್ರಸಾದ್‌. ಅವರ ನಿಧನ ವಿಷಾದದ ಸಂಗತಿ ಎಂದು ಸುತ್ತೂರು ಮಠದ ಪೀಠಾಧಿಪತಿಗಳಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಶ್ರೀನಿವಾಸ ಪ್ರಸಾದ್‌ ಅವರ ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಶ್ರೀನಿವಾಸ ಪ್ರಸಾದ್‌ ಅವರ ಅಗಲಿಕೆ ವಿಷಾದದ ಸಂಗತಿ. ರಾಜಕೀಯ ಕ್ಷೇತ್ರದಲ್ಲಿ ಧೃವತಾರೆಯಾಗಿ ಸೇವೆ ಸಲ್ಲಿಸಿದವರು. ವಿದ್ಯಾರ್ಥಿ ದಿನಗಳಿಂದಲೂ ಕೂಡ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಿದ್ದವರು. ಯಾವುದೇ ಹಿನ್ನಲೆ ಇಲ್ಲದೇ ಸ್ವಂತ ಪ್ರತಿಭೆಯಿಂದ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿ, ಅನೇಕ ರೀತಿಯ ಸೇವೆಯನ್ನು ಸಲ್ಲಿಸಿದರು.

ಶ್ರೀನಿವಾಸ ಪ್ರಸಾದ್‌ ಅವರು ನಂಬಿದ್ದ ಸಾಮಾಜಿಕ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ದಲಿತರ ಧ್ವನಿಯಾಗಿ ಸೇವೆ ಮಾಡಿದ್ದಾರೆ. ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲೂ ಕೂಡ ಶೋಷಣೆಗಳ ವಿರುದ್ಧ ಯಾವುದೇ ಸಂಕೋಚ ಇಲ್ಲದೇ ಧ್ವನಿ ಎತ್ತುತ್ತಿದ್ದಂತ ಅಪರೂಪದ ರಾಜಕಾರಣಿ ಪ್ರಸಾದ್‌.

ಯಾವುದೇ ಅಧಿಕಾರದ ಜೊತೆ ಹೊಂದಾಣಿಕೆ ಮಾಡಿಕೊಳ್ಳದೆ ನಂಬಿದಂತ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿದ್ದರು. ಅದನ್ನು ಅನೇಕ ಬಾರಿ ಅವರೇ ಪುನರುಚ್ಚರಿಸುತ್ತಿದ್ದರು.

ಸಕ್ರೀಯ ರಾಜಕಾರಣದಿಂದ ಮುಕ್ತರಾಗ, ಮುಕ್ತವಾದ ಮನಸ್ಸಿನಿಂದ ಇರೇಕು ಎಂಬ ಆಶಯ ಅವರಲ್ಲಿತ್ತು. ಚಿಧಿಯ ಸಂಕಲ್ಪದಂತೆ ಕಳೆದ ತಿಂಗಳು ರಾಜಕಾರಣದಿಂದ ನಿವೃತ್ತಿಯನ್ನು ಘೋಷಿಸಿದ್ದರು.

ಇದರಿಂದಾಗಿ ಅವರ ಜೀವನದಲ್ಲಿ ಶಾಂತಿ, ನೆಮ್ಮದಿ ಕಲ್ಪಿಸಿದೆ ಎಂದು ಭಾವಿಸಿ, ಭಗವಂತ ಆವರ ಆತ್ಮಕ್ಕೆ ಶಾಂತಿ ನೀಡಿ, ಅವರ ಕುಟುಂಬ ಹಾಗೂ ಬೆಂಬಲಿಗರಿಗೆ ದುಖಃ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆʼ ಎಂದು ತಿಳಿಸಿದರು.

Tags:
error: Content is protected !!