Mysore
21
overcast clouds

Social Media

ಬುಧವಾರ, 09 ಜುಲೈ 2025
Light
Dark

ಅಸ್ಪೃಶ್ಯತೆ ತೊಡೆದುಹಾಕಲು ಶ್ರಮಿಸಿದ ಶ್ರೀ ರಾಮಾನುಜಾಚಾರ್ಯ

ಮೈಸೂರು: ಭಾರತದಲ್ಲಿ ಸಮಾನತೆಯನ್ನು ಸಾರಿ ಸಮಾಜದಲ್ಲಿದ್ದ ಅಸ್ಪಶ್ಯತೆಯನ್ನು ತೊಡೆದು ಹಾಕಲು ಶ್ರಮಿಸಿದ ರಾಮಾನುಜಾಚಾರ್ಯರು ಹಿಂದೂ ಧರ್ಮದ ಶ್ರೇಷ್ಠ ತತ್ವಜ್ಞಾನಿಗಳಲ್ಲಿ ಒಬ್ಬರು ಎಂದು ಶ್ರೀನಿವಾಸ ಅರ್ಕ ಸ್ವಾಮೀಜಿ ಹೇಳಿದರು.

ಇಂದು (ಮೇ.೧೨)ನಗರದ ರೋಟರಿ ಪಶ್ಚಿಮ ಸಂಸ್ಥೆಯ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಶಾತ್ತಾದ ಶ್ರೀ ವೈಷ್ಣವ ಸಂಘದ ವತಿಯಿಂದ ಆಯೋಜಿಸಿದ್ದ ಭಗವದ್ ಶ್ರೀ ರಾವಾನುಜಾಚಾರ್ಯ ೧೦೦೭ನೇ ತಿರು ನಕ್ಷತ್ರ ಹಾಗೂ ೧೫ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ರಾಮಾನುಜಾಚಾರ್ಯ ಕೊಡುಗೆ ನಾಡಿಗೆ ಅಪಾರವಾಗಿದೆ. ಅವರು ಭೋದಿಸಿದ ವಿಶಿಷ್ಟದ್ವೈತ ಸಿದ್ಧಾಂತವು ಭಾರತದಲ್ಲಿ ಇಂದಿಗೂ ಆಧ್ಯಾತ್ಮಿಕ ಮಾರ್ಗವಾಗಿ ಪ್ರಕಾಶಿಸುತ್ತಿದೆ ಎಂದು ತಿಳಿಸಿದರು.

ವಿಷ್ಣುವಿನ ಆರಾಧಾಕರಾಗಿದ್ದ ರಾಮಾನುಜಾಜಾರ್ಯರನ್ನು ಗುರು, ದಾರ್ಶನಿಕ ಮತ್ತು ಸಮಾಜ ಸುಧಾರಕ ಎಂದು ಇಂದಿಗೂ ಪೂಜಿಸಲಾಗುತ್ತಿದೆ ಎಂದರು.

ಮೈಸೂರು ಜಿಲ್ಲಾ ಶಾತ್ತಾದ ಶ್ರೀ ವೈಷ್ಣವ ಸಂಘದ ಅಧ್ಯಕ್ಷ ನರಸಿಂಹಯ್ಯ, ಉಪಾಧ್ಯಕ್ಷ ಕೆ.ಎನ್.ಸಂಪತ್ ಕುಮಾರ್, ಕಾರ್ಯದರ್ಶಿ ಪುಟ್ಟಸ್ವಾಮಿ, ಸಹ ಕಾರ್ಯದರ್ಶಿ ನಾರಾಯಣ್‌ ಜಿಯರ್, ಖಜಾಂಚಿ ಪಾಲಾಕ್ಷ, ಸಹ ಕಾರ್ಯದರ್ಶಿ ಎಚ್.ಎಸ್.ಪ್ರೇಮ್ ಕುವಾರ್ ಹಾಗೂ ಸಮಿತಿ ಸದಸ್ಯರು ಹಾಜರಿದ್ದರು.

Tags:
error: Content is protected !!