ನಂಜನಗೂಡು : ರಾಜ್ಯಮಟ್ಟದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟಕ್ಕೆ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮೈಸೂರಿನ ಸೆಂಟ್ ಫಿಲೋಮಿಯ ಶಾಲೆಯ ಆವರಣದಲ್ಲಿ ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ದೈಹಿಕ ಶಿಕ್ಷಣ ವಿಭಾಗ, ಮೈಸೂರು ಇವರ ವತಿಯಿಂದ ಆಯೋಜಿಸಿದ್ದ ವಿಶೇಷ ಚೇತನ ಮಕ್ಕಳ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಮತ್ತು ವಿಜ್ಞಾನ ಕಾಲೇಜಿನ ವಿಶೇಷ ಚೇತನ ಮಕ್ಕಳು ಭಾಗವಹಿಸಿ ವಿಜೇತರಾಗಿ ಮಕ್ಕಳು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.
ಇದನ್ನು ಓದಿ: ಹುಲಿ ದರ್ಶನ : ಗ್ರಾಮಸ್ಥರಲ್ಲಿ ಆತಂಕ
ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸಮರ್ಥ್, ಜಾವೆಲಿನ್ ಮತ್ತು ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಮೊದಲ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಕ್ಕಳ ತರಬೇತುದಾರರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಶೇಖರ್ ಮತ್ತು ಮನುನಾಗರಾಜ್ ರವರ ಮಾರ್ಗದರ್ಶನದಲ್ಲಿ ತರಬೇತಿ ನೀಡಲಾಗಿದೆ. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಹೇಮಕುಮಾರ್, ವಸತಿ ನಿಲಯ ಪಾಲಕ ಕೆ.ಬಿ ಮಂಜು, ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಶೇಖರ್, ಮನು ನಾಗರಾಜು, ಉಪನ್ಯಾಸಕರಾದ ಲತಾಮಣಿ, ಮಾಲಾಶ್ರೀ, ರೂಪಿಣಿ, ವಿನೋದ್, ಮಧು, ಗೌರಿ ಮನೋಹರ್, ಶಿಕ್ಷಕರಾದ ಶಾಲಿನಿ , ಕಾವ್ಯ, ಸರಸ್ವತಿ, ರಂಜಿತಾ, ಮಹದೇವಪ್ರಸಾದ್, ನವೀನ್, ಪ್ರಸಾದ್ ಮೂರ್ತಿ, ಸಚಿನ್, ರವಿ, ಸಿಬ್ಬಂದಿಗಳಾದ ವಿನಾಯಕ ಬಾಳೆಕಾಯಿ, ನವೀನ್, ಆನಂದ್, ಪದ್ಮಾ, ಮಹೇಶ್ ಅಭಿನಂದನೆ ಸಲ್ಲಿಸಿದ್ದಾರೆ.





