Mysore
24
broken clouds

Social Media

ಬುಧವಾರ, 09 ಜುಲೈ 2025
Light
Dark

ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್ ಮತ್ತು ವೈಲ್ಡ್ ಲೈಫ್ ಕನ್ಸರ್ವೇಷನ್ ಫೌಂಡೇಶನ್ ವತಿಯಿಂದ ಗುಬ್ಬಚ್ಚಿ ದಿನ ಆಚರಣೆ.

ಮೈಸೂರು : ಟಿ.ವಿ.ಎಸ್ ಮೋಟಾರ್ ಕಂಪನಿಯ ಸಾಮಾಜಿಕ ಅಂಗ ಸಂಸ್ಥೆಯಾದ ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್ ಮತ್ತು ವೈಲ್ಡ್ ಲೈಫ್ ಕನ್ಸರ್ವೇಷನ್ ಫೌಂಡೇಶನ್ ವತಿಯಿಂದ ಮೈಸೂರು ಜಿಲ್ಲೆಯಲ್ಲಿ ವಿಭಿನ್ನವಾಗಿ ಗುಬ್ಬಚ್ಚಿ ದಿನವನ್ನು ಆಚರಿಸಲಾಯಿತು. ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್ ಸಂಸ್ಥೆಯು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆರೋಗ್ಯ, ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಗುಬ್ಬಚ್ಚಿಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಮೈಸೂರು ಜಿಲ್ಲೆಯ ಮೊತ್ತ ಗ್ರಾಮಸ್ಥರಿಗೆ ಗುಬ್ಬಚ್ಚಿಗಳ ಗೂಡುಗಳನ್ನು ಹಸ್ತಾಂತರಿಸಿ, ಗುಬ್ಬಿಗಳ ಬಗ್ಗೆ ಅರಿವು ಮೂಡಿಲಾಯಿತು ಹಾಗೂ ಸಿಂಧುವಳ್ಳಿ ಮತ್ತು ದೊಡ್ಡಕಾನ್ಯ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ಗುಬ್ಬಿಗಳ ಬಗ್ಗೆ ಅರಿವು ಮತ್ತು ಜಾಗೃತಿಯನ್ನು ಮೂಡಿಸಲಾಯಿತು.ಇದೇ ವೇಳೆ ಮಾತನಾಡಿದ ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್ ಸಂಸ್ಥೆಯ ಕ್ಷೇತ್ರ ನಿರ್ದೇಶಕರಾದ ಎಸ್. ಸುಬ್ರಹ್ಮಣ್ಯಂ, ಹಿಂದೆ ಹಂಚುಗಳಲ್ಲಿ, ಹಳೆ ಕಟ್ಟಡಗಳಲ್ಲಿ, ಬಾವಿಗಳ ಬಿರುಕಿನಲ್ಲಿ ಗುಬ್ಬಿ ಗೂಡನ್ನು ಕಟ್ಟುತ್ತಿತ್ತು. ಇದೀಗ ಮೈದಾನವೆಲ್ಲ ಕಾಂಕ್ರೀಟ್ ಮಯವಾಗಿದ್ದು, ಹಂಚಿನ ಮನೆಗಳು ಆರ್.ಸಿ.ಸಿಯಾಗಿದೆ. ಗುಬ್ಬಿ ಸ್ನೇಹಜೀವಿ. ಅದನ್ನು ಉಳಿಸುವ ಪ್ರಯತ್ನವನ್ನು ಎಲ್ಲರೂ ಸೇರಿ ಮಾಡಬೇಕೆಂದರು.ಜನವಸತಿ ಪ್ರದೇಶಗಳಲ್ಲಿ ಮಾತ್ರ ವಾಸಿಸಿವ ಗುಬ್ಬಚ್ಚಿಗಳು, ಇಂದು ನಮ್ಮ ಆಧುನಿಕತೆಯ ಹೊಡೆತಕ್ಕೆ ಸಿಕ್ಕಿ ಅಪ್ಪಚಿಯಾಗಿದೆ. ಅವುಗಳ ಸಂತತಿಯ ಉಳಿವಿಗೆ ಕಾರ್ಯಪ್ರವೃತ್ತರಾಗೋಣ ಎಂದು ತಿಳಿಸಿದರು. ನಂತರ ಮಾತನಾಡಿದ ವೈಲ್ಡ್ ಲೈಫ್ ಕನ್ಸರ್ವೇಷನ್ ಫೌಂಡೇಶನ್ ನ ರಾಜ್ ಕುಮಾರ್,ಗುಬ್ಬಚ್ಚಿಗಳ ಸಂರಕ್ಷಣೆಯಲ್ಲಿ ನಾವುಗಳು ನಿರ್ವಹಿಸಬೇಕಾದ ಬಗೆ,ಗುಬ್ಬಚ್ಚಿಗಳಿಗೆ ಆಹಾರ ಮತ್ತು ನೀರನ್ನು ನೀಡುವುದು ಜೊತೆಗೆ ಸಾಕು ಪ್ರಾಣಿಗಳಾದ ನಾಯಿ ಮತ್ತು ಬೆಕ್ಕುಗಳಿಂದ ಗುಬ್ಬಚ್ಚಿಗಳನ್ನು ಹೇಗೆ ಸಂರಕ್ಷಣೆ ಮಾಡಬೇಕೆಂದು ವಿವರಿಸಿದರು. ನಂತರ ಮಾತನಾಡಿದ ಸಿಂಧುವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರು, ಇಂದು 6 ಮತ್ತು 7ನೇ ತರಗತಿಯ ಮಕ್ಕಳಿಗೆ ಜಾಗೃತಿ ಮೂಡಿಸಿ, ಪಕ್ಷಿಗಳನ್ನು ರಕ್ಷಿಸುವ ಬಗ್ಗೆ ಅರಿವನ್ನು ಮೂಡಿಸಿದ್ದು,ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿದೆ,ಎಂದರು ಇದೇ ಸಂದರ್ಭದಲ್ಲಿ ನಾಡ ಹಂಚಿನ ಮನೆಗಳಿರುವ ವಿದ್ಯಾರ್ಥಿಳಿಗೆ ಗುಬ್ಬಿ ಗೂಡುಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್ ಸಂಸ್ಥೆಯ ಕ್ಷೇತ್ರ ನಿರ್ದೇಶಕರಾದ ಎಸ್ ಸುಬ್ರಹ್ಮಣ್ಯಂ ವೈಲ್ಡ್ ಲೈಫ್ ಕನ್ಸರ್ವೇಷನ್ ಫೌಂಡೇಶನ್ ನ ರಾಜ್ ಕುಮಾರ್ ಸೇರಿದಂತೆ ಮುಂತಾದವರು ಭಾಗಿಯಾಗಿದ್ದರು.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!