Mysore
29
scattered clouds
Light
Dark

ಮೇ.೯ ರಿಂದ ನಂಜನಗೂಡಿನಲ್ಲಿ ನಾಲ್ಕು ದಿನ ಶಂಕರ ಜಯಂತಿ

ನಂಜನಗೂಡು: ಇಲ್ಲಿನ ಶೃಂಗೇರಿ ಶಂಕರ ಮಠದ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ಶಂಕರ ಜಯಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಪ್ರಸಕ್ತ ವರ್ಷದ ಶಂಕರ ಜಯಂತಿಯು ಮೇ ೯ರ ಗುರುವಾರದಿಂದ ೧೨ರವರೆಗೂ ನಡೆಯಲಿದೆ. ಈ ನಾಲ್ಕೂ ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಜೊತೆಗೆ ಭಜನೆ, ಭಕ್ತಿಗೀತೆ ಹಾಗೂ ಭರತ ನಾಟ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಜಯಂತಿಯ ಕೊನೆದಿನವಾದ ಭಾನುವಾರ ಶಂಕರ ಭಗವತ್ಪಾದರ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ. ನಂತರ ಮಠದ ಆಶ್ರಯದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸಮಾಜ ಸೇವಕ ಎಂ.ಎನ್.ಪದ್ಮನಾಭರಾವ್ ಮತ್ತು ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಆರ್.ಗೋವರ್ಧನ್ ಭಾಗಿಯಾಗಲಿದ್ದಾರೆ ಎಂದು ಮಠದ ಧರ್ವಾಧಿಕಾರಿ ಶ್ರೀಕಂಠ ಜೋಸ್ ತಿಳಿಸಿದ್ದಾರೆ.‌