ಮೈಸೂರು : ಕಾರವಾರ ಜಿಲ್ಲೆ ಸಿದ್ದಾಪುರದ ಬಳಿ ನಡೆದ ಅಫಘಾತದಲ್ಲಿ ಮೃತಪಟ್ಟ ಬಾಲಕ ಪವನ್ ಕುಟುಂಬಕ್ಕೆ ತರಳಬಾಳು ಶಾಲೆ ಆಡಳಿತ ಮಂಡಳಿ ವತಿಯಿಂದ 30 ಲಕ್ಷ ರೂ. ಪರಿಹಾರ ನೀಡಲಾಗಿದೆ.
ಸೋಮವಾರ ಬೆಳಿಗ್ಗೆ ಶಾಸಕ ಕೆ.ಹರೀಶ್‌ಗೌಡ, ಶ್ರೀವತ್ಸ, ನಗರಪಾಲಿಕೆ ಮಾಜಿ ಸದಸ್ಯ ಜಿ.ಗೋಪಿ. ಜೆ.ಜಗದೀಶ್ ಅವರ ನೇತೃತ್ವದಲ್ಲಿ ಸಭೆ ನಡೆಸಿದ ಆಡಳಿತ ಮಂಡಳಿ ಸದಸ್ಯರು, ಮೃತ ಬಾಲಕನ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡಿದ್ದಲ್ಲದೆ, ಅಂತ್ಯ ಸಂಸ್ಕಾರದ ಖರ್ಚುವೆಚ್ಚಗಳಿಗೆ ಸಹಕಾರ ನೀಡಲು ಒಪ್ಪಿಗೆ ನೀಡಿದ್ದಾರೆ.
ಸೋಮವಾರ ಬೆಳಿಗ್ಗೆ ಶಾಲೆಯ ಕಚೇರಿಗೆ ತೆರಳಿದ ಶಾಸಕದ್ವಯರು ಅಲ್ಲಿನ ಆಡಳಿತ ಮಂಡಳಿ ಹಾಗೂ ಪೋಷಕರ ಸಮ್ಮುಖದಲ್ಲಿ ಮಾತುಕತೆ ನಡೆಸಿದ್ದಾರೆ. ನಂತರ ಇಬ್ಬರಿಗೂ ಒಪ್ಪಿಗೆಯಾಗುವ ರೀತಿಯಲ್ಲಿ 30 ಲಕ್ಷ ರೂ. ಪರಿಹಾರದ ಚೆಕ್ ಕೊಡಿಸಿದ್ದಾರೆ.
ಇದನ್ನೂ ಓದಿ:-ದಿತ್ವಾ ಚಂಡಮಾರುತ : ಮೈಸೂರು, ಬೆಂಗಳೂರು ಸೇರಿದಂತೆ ವಿವಿಧೆಡೆ ಚಳಿ ಹೆಚ್ಚಳ
ಇದೇ ವೇಳೆ ಸಿದ್ದಾಪುರ ಬಳಿ ಹೊನ್ನಾವರ ಹಾಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಎಲ್ಲಾ ವಿದ್ಯಾರ್ಥಿಗಳನ್ನು ಮೈಸೂರಿಗೆ ಕರೆತರಲಾಗುತ್ತಿದೆ. ಕತ್ತಿನ ಭಾಗದಲ್ಲಿ ಗಂಭೀರ ಗಾಯವಾಗಿರುವ ಗೌತಮಿ ಖುಷಿ ಹಾಗೂ ಕಾಯಕ್ ಎಂಬವರಿಗೆ ಮಣಿಪಾಲ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರೆಸಲಾಗಿದೆ.





