Mysore
25
scattered clouds

Social Media

ಮಂಗಳವಾರ, 21 ಏಪ್ರಿಲ 2026
Light
Dark

ಪಿರಿಯಾಪಟ್ಟಣ: ಶಾಲಾ ವಾಹನ ಪಲ್ಟಿ: ಮಕ್ಕಳಿಗೆ ಗಂಭೀರ ಗಾಯ

ಪಿರಿಯಾಪಟ್ಟಣ: ಶಾಲಾ ವಾಹನ ಪಲ್ಟಿಯಾಗಿ ಮಕ್ಕಳಿಗೆ ಗಂಭೀರ ಗಾಯಗಳಾಗಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಹಬ್ಬನಗುಪ್ಪೆ ಗ್ರಾಮದ ಬಳಿ ನಡೆದಿದೆ.

ಕಂಪಲಾಪುರ ನೊಬೆಲ್ ಶಾಲೆಗೆ ಸೇರಿದ ವಾಹನ ಇದಾಗಿದ್ದು, ವಾಹನದ ಮುಂಭಾಗದ ಟೈಯರ್ ಪಂಚರ್ ಆದ ಕಾರಣ ಹಳ್ಳಕ್ಕೆ ಪಲ್ಟಿಯಾಗಿದೆ. ವಾಹನದಲ್ಲಿದ್ದ ಸುಮಾರು 16 ಮಕ್ಕಳಿಗೆ ಗಾಯಗಳಾಗಿದ್ದು, ಮಕ್ಕಳನ್ನು ಹುಣಸೂರಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಪಿರಿಯಾಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:
error: Content is protected !!