ಮೈಸೂರು : ವೇತನ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಹೊರ ಗುತ್ತಿಗೆ ನೌಕರರೊಬ್ಬರು ಅತ್ಮಹತ್ಯಗೆ ಯತ್ನಿಸಿರುವ ಘಟನೆ ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿ ಆವರಣದಲ್ಲಿ ನಡೆದಿದೆ.
ಹೊರಗುತ್ತಿಗೆ ನೌಕರ ದೀಪಕ್ ಎಂಬಾತನೇ ಆತ್ಮಹತ್ಯಗೆ ಯತ್ನಿಸಿದವರು. ಕಳೆದ ನಾಲ್ಕು ತಿಂಗಳಿನಿಂದ ನನಗೆ ಏಜೆನ್ಸಿ ವತಿಯಿಂದ ವೇತನ ನೀಡಲಾಗಿಲ್ಲ ಎಂದು ಆರೋಪಿಸಿ ಆತ ಗುರುವಾರ ಮದ್ಯಾಹ್ನ ಕಚೇರಿ ಆವರಣದಲ್ಲಿ ಆತ್ಮಹತ್ಯಗೆ ಯತ್ನಿಸಿದ್ದಾರೆ.
ಕೂಡಲೇ ಅಲ್ಲಿಗೆ ಬಂದ ಕಚೇರಿಯ ಇತರೆ ನೌಕರರು ಆತನ ಬಳಿ ಇದ್ದ ಹಗ್ಗವನ್ನು ಕಸಿದುಕೊಂಡು ಆತನಿಗೆ ಬುದ್ದಿ ಹೇಳಿದ್ದಾರೆ. ಈ ಸಂಬಂದ ಏಜೆನ್ಸಿಯ ಮುಖಂಡರೊಂದಿಗೆ ಮಾತನಾಡಿರುವ ಅಧಿಕಾರಿಗಳು ಕೂಡಲೇ ಆತನನ್ನು ಸೇವೆಯಿಂದ ಬಿಡುಗಡೆಗೊಳಿಸುವಂತೆ ಪತ್ರ ಬರೆದಿದ್ದಾರೆ. ಈ ಸಂಬಂದ ಯಾವುದೇ ದೂರು ದಾಖಲಾಗಿಲ್ಲ.





