ಮೈಸೂರು : ಅಪ್ರಾಪ್ತ ಬಾಲಕಿ ರೇಪ್ ಅಂಡ್ ಮರ್ಡರ್ ಪ್ರಕರಣ ವಿಚಾರಕ್ಕೆ ಸಂಬಧಪಟ್ಟಂತೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಕೆಲ ವಿಚಾರಗಳನ್ನು ತಿಳಿಸಿದ್ದಾರೆ.
ನಿನ್ನೆ ನಜರಾಬಾದ್ ಲಿಮಿಟ್ ಅಲ್ಲಿ ಅಪ್ರಾಪ್ತ ಬಾಲಕಿ ರೇಪ್ ಅಂಡ್ ಮರ್ಡರ್ ಆಗಿದೆ. ಇದರ ಸಂಬಂಧ ನಾವು ಆರೋಪಿ ಅರೆಸ್ಟ್ ಮಾಡಿದ್ದೇವೆ. ನಿನ್ನೆ ಆರೋಪಿ ಕರೆದುಕೊಂಡು ಬರುತ್ತಿದ್ದ ವೇಳೆ ಸಿದ್ದಲಿಂಗಪುರ ಅಂತ ಹೇಳಿದ್ದ. ಮಹಜರ್ ಗಾಗಿ ಅಲ್ಲಿ ಕರೆದುಕೊಂಡು ಹೋದ ಸಂಧರ್ಭದಲ್ಲಿ ನಮ್ಮ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆ ಸಂಧರ್ಭದಲ್ಲಿ ನಮ್ಮವರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಹೀಗಿದ್ದೂ ಪೊಲೀಸ್ ತಂಡದಲ್ಲಿದ್ದ ಇಬ್ಬರು ಸಿಬ್ಬಂದಿಗಳ ಮೇಲೆ ಬಾಟಲ್ ನಿಂದ ಚುಚ್ಚಿದ್ದಾನೆ ಎಂದು ಮಾಹಿತಿ ನೀಡಿದರು.
ಇದನ್ನು ಓದಿ : ಮೈಸೂರಿನಲ್ಲಿ ಬಾಲಕಿ ಅತ್ಯಾಚಾರ ಕೊಲೆ ಪ್ರಕರಣ : ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು
ಈತನ ಮೇಲೆ ಹಳೆಯ ಕೇಸ್ ಕೂಡ ಇದೆ. ಬೇಲ್ ಮೇಲೆ ಹೊರಗಡೆ ಬಂದಿದ್ದ. ನಿನ್ನೆ ಮಗು ಮಲಗಿದ್ದ ವೇಳೆ ಎತ್ತುಕೊಂಡು ಹೋಗಿ ಕೃತ್ಯ ಮಾಡಿದ್ದಾನೆ. ಈತ ಮಾದಕ ವ್ಯಸನಿ ಅಂತ ಗೊತ್ತಾಗಿದೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಂಡಿದ್ದೇವೆ ಎಂದರು.
ಇನ್ನೂ ಹಾಡು ಹಗಲೇ ವೆಂಕಟೇಶ್ ಕೊಲೆ ಪ್ರಕರಣ ಸಂಬಂಧ ಮಾಹಿತಿ ನೀಡಿ, ವೆಂಕಟೇಶ್ ಹತ್ಯೆಯಲ್ಲಿ 6 ಜನ ಭಾಗಿಯಾಗಿದ್ದಾರೆ. ಈಗಾಗಲೇ ಅವರನ್ನು ಅರೆಸ್ಟ್ ಮಾಡಿದ್ದೇವೆ. ಧ್ರುವ ಕುಮಾರ್ ಒಬ್ಬರು ಮಂಡ್ಯದವರು, ಉಳಿದ 5 ಜನ ಮೈಸೂರಿನವರು. ಹಾಲಪ್ಪ ಹಾಗೂ ಮೃತ ವೆಂಕಟೇಶ್ ನಡುವೆ ಶೀತಲ ಸಮರ ಇತ್ತು. ಒಂದೇ ಗ್ರೂಪ್ ಆದ್ರೂ ಸಹ ನಾನಾ ನೀನಾ ಅನ್ನೋ ವಿಚಾರಕ್ಕೆ ಕೊಲೆ ಆಗಿದೆ. ಈ ಹಿಂದೆ ನಡೆದ ಕಾರ್ತಿಕ್ ಕೊಲೆಗೂ ಇದಕ್ಕೂ ಲಿಂಕ್ ಇದ್ಯಾ ಅಂತ ನೋಡುತ್ತಿದ್ದೇವೆ. ಅವರು ಸಣ್ಣ ಪುಟ್ಟ ಫೈನಾನ್ಸ್ ಮಾಡುತ್ತಿದ್ದ ಅಂತ ಗೊತ್ತಾಗಿದೆ ಎಂದು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಹೇಳಿದ್ದಾರೆ.





