Mysore
26
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಮೈಸೂರಲ್ಲಿ ರಜನಿಕಾಂತ್‌ : ಅಭಿಮಾನಿಗಳಿಗೆ ನಮಸ್ಕರಿಸಿದ ತಲೈವಾ

talaiva

ಮೈಸೂರು :‌ ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್‌ ರಜನಿಕಾಂತ್ ಅವರು ಜೈಲರ್‌ -2 ಸಿನಿಮಾದ ಕೆಲವು ಭಾಗದ ಚಿತ್ರಿಕರಣ ಮೈಸೂರಿನ ಬಿಳಿಕೆರೆಯ ಹುಲ್ಲೇನಹಳ್ಳಿಯಲ್ಲಿ ನಡೆಯುತ್ತಿದ್ದು, ಅಭಿಮಾನಿಗಳು ರಜನಿಕಾಂತ್‌ ಅವರನ್ನು ನೋಡಲು ಮುಗಿಬಿದ್ದು ಚಿತ್ರಕರಣ ಸ್ಥಳಕ್ಕೆ ದೌಡಯಿಸುತ್ತಿದ್ದಾರೆ.

ಇದನ್ನೂ ಓದಿ: ಮೈಸೂರಲ್ಲಿ ಜೈಲರ್-‌2 ಶೂಟಿಂಗ್‌ ಆರಂಭ ; 3 ದಿನ ವಾಸ್ತವ್ಯ ಹೂಡಲಿರೋ ತಲೈವಾ

ಚಿತ್ರೀಕರಣದ ಸಂದರ್ಭದಲ್ಲಿ ಸಾರ್ವಜನಿಕ ನಿರ್ಬಂಧಕ್ಕೆ ಚಿತ್ರ ತಂಡವು ಎಚ್ಚರ ವಹಿಸಿದೆ. ಎಲ್ಲ ಕಡೆಗಳಲ್ಲಿ ಯೂ ಬಿಗಿ ಬಂದೋ ಬಸ್ತ್ ಹಾಕಲಾಗಿದೆ. ಚಿತ್ರೀಕರಣ ಮುಗಿದ ನಂತರ ಅಭಿಮಾನಿಗಳು ರಜನಿಕಾಂತ್ ಅವರನ್ನು ನೋಡಲು ಚಿತ್ರೀಕರಣದ ಸ್ಥಳಕ್ಕೆ ದೌಡಾಯಿಸಿದ್ದು, ನಟ ರಜನಿಕಾಂತ್ ಅಭಿಮಾನಿಗಳಿಗೆ ಕೈಬೀಸಿ, ನಮಸ್ಕರಿಸಿ ಕಾರಿನಲ್ಲಿ ತೆರಳುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದು ಮಾಡುತ್ತಿವೆ.

ಈ ಚಿತ್ರದ ಚಿತ್ರೀಕರಣವೂ ನಾಲ್ಕರಿಂದ ಐದು ದಿನಗಳವರೆಗೆ ನಡೆಯಲಿದೆ. ಈಗಾಗಲೇ ಮೈಸೂರು ಭಾಗದ ಹುಲ್ಲೇನಹಳ್ಳಿಯ ಸೇತುವೆ ಮೇಲೆ ಕೆಲವು ದೃಶ್ಯಗಳು ಹಾಗೂ ಆಕ್ಷನ್ ದೃಶ್ಯಗಳನ್ನು ಮೂರು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಇದೇ ಸ್ಥಳದಲ್ಲಿ ೪೦ ವರ್ಷಗಳ ಹಿಂದೆ ಕನ್ನಡದ ಮೇರು ನಟ ಡಾ.ರಾಜ್‌ಕುಮಾರ್ ಅವರ ನಟನೆಯ ಹೊಸಬೆಳಕು ಸಿನಿಮಾ ಚಿತ್ರೀಕರಣವಾಗಿತ್ತು. ಇದೀಗ ಚಿತ್ರತಂಡವು ಹುಣಸೂರಿನ ಬಿಳಿಕೆರೆಯಲ್ಲಿ ಚಿತ್ರೀಕರಣ ನಡೆಸುತ್ತಿದೆ. ಚಿತ್ರೀಕರಣಕ್ಕಾಗಿ ಚಿತ್ರತಂಡ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

Tags:
error: Content is protected !!