Mysore
18
overcast clouds

Social Media

ಬುಧವಾರ, 28 ಜನವರಿ 2026
Light
Dark

ಅಗತ್ಯ ವಸ್ತುಗಳ ಬೆಲೆ ಏರಿಸಿ ಜನ ಸಾಮಾನ್ಯರಿಗೆ ಬರೆ ಎಳೆದಿರುವುದೇ ಕಾಂಗ್ರೆಸ್‌ ಸಾಧನೆ : ಸಾ.ರಾ ಮಹೇಶ್‌ ಆಕ್ರೋಶ

Sa Ra mahesh

ಹೊಸೂರು : ಗೃಹಲಕ್ಷ್ಮೀಯ 2 ಸಾವಿರ ರೂ. ನೀಡಲು ಸರ್ಕಾರದ ಬಳಿ ಹಣ ಇಲ್ಲದೇ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿ ಜನ ಸಾಮಾನ್ಯರಿಗೆ ಬರೆ ಎಳೆದಿರುವುದೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ ಎಂದು ಜಾ.ದಳ ಕಾರ್ಯಾಧ್ಯಕ್ಷ , ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.

ಸಾಲಿಗ್ರಾಮ ತಾಲ್ಲೂಕಿನ ಶ್ರೀರಾಮಪುರ ಗ್ರಾಮಸ್ಥರು ತಮಗೆ ಏರ್ಪಡಿಸಿದ್ದ ಸನ್ಮಾನ ಮತ್ತು ಹುಟ್ಟು ಹಬ್ಬದ ಅಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕೆ.ಅರ್.ನಗರ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ನೀಡಿದ್ದರು. ಆದರೆ ಈಗಿನ ಮುಖ್ಯಮಂತ್ರಿಗಳು ಕ್ಷೇತ್ರಕ್ಕೆ ಎಷ್ಟು ಅನುದಾನ ನೀಡಿದ್ದಾರೆ? ಅವರು ನೀಡಿರುವ ಅನುದಾನ ಪ್ರಚಾರಕ್ಕಷ್ಟೆ ಸೀಮಿತವಾಗಿದೆ ಎಂದರು.

ತಾವು ಶಾಸಕರಾಗಿದ್ದ ಶ್ರೀರಾಮಪುರ ಹಾಗೂ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಮಂಜೂರು ಅಗಿದ್ದ ಕಾಮಗಾರಿಗಳನ್ನು ಬೇರೆ ಗ್ರಾಮಗಳಿಗೆ ಬದಲಾಯಿಸುತ್ತಿದ್ದು, ಇದಕ್ಕೆ ಮಂಡಿಗನಹಳ್ಳಿ ಏತ ನೀರಾವರಿ ಯೋಜನೆಯನ್ನು ಕಾಳೇನಹಳ್ಳಿಗೆ ವರ್ಗಾಯಿಸಿ ಅಭಿವೃದ್ಧಿಯಲ್ಲಿಯು ಸೇಡಿನ ರಾಜಕಾರಣ ಮಾಡಲಾಗುತ್ತಿದೆ ಎಂದು ಹೇಳಿದರು.

ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಆರಂಭವಾಗದೆ ರೈತರು ಕಬ್ಬನ್ನು ಬೇರೆ ಕಾರ್ಖಾನೆಗೆ ಸಾಗಿಸುತ್ತಿದ್ದಾರೆ. ಕಳೆದ ಬಾರಿ ಪ್ರತಿ ಟನ್ ಕಬ್ಬು ಸಾಗಾಣಿಕೆ ವೆಚ್ಚ ೧೬೦ ರೂ. ಇತ್ತು. ಈ ಬಾರಿ ೨೮೦ ರೂ. ಆಗಿದೆ. ರೈತರ ಹಿತಕಾಯ ಬೇಕಾದವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಶ್ರೀರಾಮಪುರದ ತಮ್ಮ ಬಾಲ್ಯದ ನೆನಪು ಮಾಡಿಕೊಂಡ ಸಾ.ರಾ.ಮಹೇಶ್ ಇದೇ ಸಂದರ್ಭದಲ್ಲಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನೌಕರರಾಗಿ ಕೆಲಸ ನಿರ್ವಹಿಸಿ ಸೇವೆಯಿಂದ ನಿವೃತ್ತಿಯಾದ ಅನುಸೂಯ ಅವರನ್ನು ಸನ್ಮಾನಿಸಿದರು.

ಜಾ.ದಳ ಮುಖಂಡ ಕೆ.ಆರ್.ಸಂತೋಷ್, ಸಿದ್ದಾಪುರ ಗ್ರಾ.ಪಂ.ಸದಸ್ಯ ಎಸ್.ಕೆ.ಅಭಿಲಾಷ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಪ್ರಸನ್ನ, ಎಸ್.ಬಿ.ಶಿವಣ್ಣ, ಡೇರಿ ಮಾಜಿ ಅಧ್ಯಕ್ಷ ಎಸ್.ಟಿ.ನಾರಾಯಣ್, ಸದಸ್ಯ ಹರೀಶ್ ಬಾಬು, ಮುಖಂಡರಾದ ಭೋಜೆಗೌಡ, ರಘು ಕರೀಗೌಡ, ಭಾಸ್ಕರ್, ರಾಮು, ಕುಬೇರ, ಎಚ್.ಎಸ್.ರಾಜು, ಎಂ.ಎಸ್.ರಾಮಚಂದ್ರ, ಚಂದನ್ ಗೌಡ, ಸತ್ಯನಾರಾಯಣ, ಯಶವಂತ್ ಗೌಡ, ಎಸ್.ಎಸ್.ಬಾಲರಾಜ್, ಹೋಟೆಲ್ ಸತೀಶ್, ಶಿವರುದ್ರ, ಎಸ್.ಪಿ.ಮಂಜುನಾಥ್, ಮನೋಹರ್, ಮಣಿಶ್ರೀ, ಹೊಸೂರು ಸೊಸೈಟಿ ಅಧ್ಯಕ್ಷ ಎಚ್.ಎಸ್.ಜಗದೀಶ್, ವಕೀಲ ತಿಮ್ಮಪ್ಪ, ಹೆಬ್ಬಾಳು ಶಂಕರ್, ಮತ್ತಿತರರು ಹಾಜರಿದ್ದರು.

Tags:
error: Content is protected !!