Mysore
26
overcast clouds

Social Media

ಭಾನುವಾರ, 27 ಏಪ್ರಿಲ 2025
Light
Dark

ವಿ. ಸೋಮಣ್ಣ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ ಪ್ರತಾಪ್ ಸಿಂಹ

ನವದೆಹಲಿ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಪ್ರತಾಪ್‌ ಸಿಂಹ ಅವರು ವಿ. ಸೊಮಣ್ಣ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.

ನರೇಂದ್ರ ಮೋದಿ ಅವರು ಸಚಿವ ಸಂಪುಟ ರಚಿಸಿದ ಮೇಲೆ ಖಾತೆಗಳನ್ನು ಹಂಚಿಕೆ ಮಾಡಿದ್ದು, ಐವರು ಕನ್ನಡಿಗರಿಗೆ ಖಾತೆ ಹಂಚಲಾಗಿದೆ. ಇನ್ನು ಇದರಲ್ಲಿ ಮಾಜಿ ಸಚಿವ ವಿ. ಸೋಮಣ್ಣ ಅವರಿಗೆ ರೈಲ್ವೆ ಖಾತೆಗಳ ರಾಜ್ಯ ಸಚಿವರಾಗಿ ಅಧಿಕಾರ ಸಿಕ್ಕ ಬಳಿಕ ಅವರನ್ನು ಮೊದಲ ಬಾರಿಗೆ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು ಭೇಟಿಯಾಗಿದ್ದಾರೆ.

ದೆಹಲಿಯಲ್ಲಿಂದು (ಜೂನ್‌.11) ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ವಿ.ಸೋಮಣ್ಣರವರನ್ನು ಭೇಟಿ ಮಾಡಿ ಪ್ರತಾಪ್‌ ಸಿಂಹ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳುವ ಮೂಲಕ ಶುಭ ಕೋರಿದ್ದಾರೆ.

Tags: