ಮೈಸೂರು : ಕಾಶ್ಮೀರದಲ್ಲಿ ಉಗ್ರರ ದಾಳಿ ವಿಚಾರವಾಗಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಒಗ್ಗಟ್ಟಿಲ್ಲದ ಹಿಂದೂಗಳೆ ಈಗಲಾದರೂ ಎಚ್ಚೆತು ಕೊಳ್ಳಿ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಉಗ್ರರು ಹಿಂದೂ ಪುರುಷರ ಮರಣ ಹೋಮ ಮಾಡಿದ್ದಾರೆ. ನಿರಾಭಿಮಾನಿ, ಜಾತಿವಾದಿ, ಒಗ್ಗಟ್ಟಿಲ್ಲದ ಹಿಂದೂಗಳೆ ಈಗಲಾದರೂ ಎಚ್ಚೆತು ಕೊಳ್ಳಿ. ಹತ್ಯೆಯಾದ ಮಂಜುನಾಥ್ ಮುಂದೆ ಶರ್ಮಾ ಇದ್ದರು ಕೊಲುತ್ತಿದ್ದರು. ರಾವ್, ಗೌಡ, ಹಾಲು ಮತಸ್ತ ಹೀರೇಮಠ್, ಅಯ್ಯ ಯಾರೇ ಇದ್ದರು ಉಗ್ರರು ಕೊಲ್ಲುತ್ತಿದ್ದರು. ಆದರೆ ಮಂಜುನಾಥ್ ಮಹಮದ್ ಆಗಿದ್ದರೆ ಮಾತ್ರ ಬಿಡುತ್ತಿದ್ದರು ಎಂದು ಹೇಳಿದ್ದಾರೆ.
ನಿರಾಭಿಮಾನಿ, ಒಗ್ಗಟ್ಟಿಲ್ಲದ ಹಿಂದೂಗಳು ಹೀಗಲಾದರೂ ಅರ್ಥ ಮಾಡಿಕೊಂಡು ಒಗ್ಗಟಾಗಿ ಬಾಳಿ ಎಂದ ಅವರು ದೇಶದ ಒಳಗಿನ ಮುಸ್ಲಿಂರ ಬೆಂಬಲ ಇಲ್ಲದೆ ಉಗ್ರರು ಈ ಕೃತ್ಯ ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ.





