Mysore
30
clear sky

Social Media

ಗುರುವಾರ, 06 ಫೆಬ್ರವರಿ 2025
Light
Dark

ಮಹಾ ಕುಂಭಮೇಳ ಸ್ನಾನ: ನಕಲಿ ಫೋಟೋ ಶೇರ್‌ ಮಾಡಿದ್ದ ಪ್ರಶಾಂತ್‌ ಸಂಬರ್ಗಿ ವಿರುದ್ಧ ದೂರು ದಾಖಲಿಸಿದ ಪ್ರಕಾಶ್‌ ರಾಜ್‌

ಮೈಸೂರು: ಮಹಾಕುಂಭಮೇಳದಲ್ಲಿ ನಟ ಪ್ರಕಾಶ್‌ ರಾಜ್‌ ಸ್ನಾನ ಮಾಡುತ್ತಿರುವ ರೀತಿಯಂತಹ ನಕಲಿ ಫೋಟೋವನ್ನು ವೈರಲ್‌ ಮಾಡಿ ಶೇರ್‌ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರ್ಗಿ ಅವರ ವಿರುದ್ಧ ಪ್ರಕಾಶ್‌ ಮೈಸೂರಿನಲ್ಲಿ ದೂರು ದಾಖಲಿಸಿದ್ದಾರೆ.

ಮೈಸೂರಿನ ಜಯಲಕ್ಷ್ಮೀಪುರ ಪೊಲೀಸ್‌ ಠಾಣೆಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದು, ಪ್ರಶಾಂತ್‌ ಸಂಬರ್ಗಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಈ ವಿಚಾರದ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಪ್ರಕಾಶ್‌ ರಾಜ್‌ ಅವರು, ಕುಂಭಮೇಳದ ಪುಣ್ಯ ಸ್ನಾನ ದೇಶದಲ್ಲಿ ನಡೆಯುತ್ತಿದೆ. ಈ ಸ್ನಾನ ಹಿಂದೂ ಧರ್ಮದವರಿಗೆ ಮತ್ತು ದೇವರನ್ನು ನಂಬಿ, ಪೂಜಿಸುವವರಿಗೆ ಅದು ಪುಣ್ಯ ಸ್ಥಳವಾಗಿದೆ. ಹೀಗಿರುವಾಗ ಎಐ ಆಪ್‌ ಬಳಸಿ ಪ್ರಕಾಶ್‌ ರಾಜ್‌ ಕುಂಭಮೇಳದಲ್ಲಿ ಸ್ನಾನ ಮಾಡಿದರಾ? ಎಂದು ಫೋಟೋ ಶೇರ್‌ ಮಾಡಿ ವೈರಲ್‌ ಆಗುವಂತೆ ಮಾಡುತ್ತಿದ್ದಾರೆ. ಅಲ್ಲದೇ ಅಂತಹ ಪುಣ್ಯಕ್ಷೇತ್ರದಲ್ಲಿ ಸ್ನಾನ ಮಾಡುವ ವಿಚಾರದಲ್ಲೂ ಇದೀಗ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇನ್ನೂ ಪ್ರಶಾಂತ್‌ ಸಂಬರ್ಗಿ ಫೋಟೋ ವೈರಲ್‌ ಮಾಡಿದಲ್ಲದೇ, ಪ್ರಕಾಶ್‌ ರಾಜ್‌ ಹಿಂದೂ ವಿರೋಧಿ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅವರು ಪ್ರಖ್ಯಾತರೋ? ಅಥವಾ ಕುಖ್ಯಾತರೋ ನನಗೆ ತಿಳಿದಿಲ್ಲ. ಆದರೆ ದೇಶದಲ್ಲಿ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಅಭ್ಯಾಸವಾಗಿದೆ. ಆದರೆ ಇದನ್ನು ಯಾರು ಪ್ರಶ್ನಿಸುತ್ತಿಲ್ಲ, ಅವರು ದ್ವೇಷವನ್ನು ಹರಡುತ್ತಿದ್ದಾರೆ. ಇವರು ನಿಜವಾದ ಹಿಂದೂ ಧರ್ಮದವರಲ್ಲ, ಅವರು ಸಾರ್ವಜನಿಕರ ನಂಬಿಕೆಗೆ ಆಘಾತ ಮಾಡುತ್ತಿದ್ದಾರೆ. ಹೀಗಾಗಿ ನನ್ನ ವಿರುದ್ಧ ಸಾಕಷ್ಟು ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು ಈ ಕಾರಣಕ್ಕೆ ಪ್ರಶಾಂತ್‌ ಸಂಬರ್ಗಿ ಮೇಲೆ ಕೇಸ್‌ ದಾಖಲಿಸಿದ್ದೇನೆ. ಹೀಗಾಗಿ ನನ್ನ ದೂರಿನ ಅನ್ವಯ ಎಫ್‌ಐಆರ್‌ ದಾಖಲಿಸಲಾಗಿದೆ. 15 ದಿನಗಳಲ್ಲಿ ಆ ವ್ಯಕ್ತಿ ಠಾಣೆಗೆ ಬಂದು ಉತ್ತರ ನೀಡಬೇಕು. ಹಾಗಾಗಿ ಸತ್ಯಾಸತ್ಯತರ ಎಲ್ಲರಿಗೂ ತಿಳಿಯಬೇಕು ಎಂದು ಹೇಳಿದರು.

Tags: