Mysore
25
overcast clouds
Light
Dark

ಎಸ್‌ಐಟಿ ತನಿಖಾ ಸಂಸ್ಥೆ ಮೇಲೆ ನಮಗೆ ನಂಬಿಕೆಯಿಲ್ಲ: ಜಿಟಿ ದೇವೇಗೌಡ

ಮೈಸೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಮೇ.16) ಮೈಸೂರಿನಲ್ಲಿ ಶಾಸಕ ಜಿಟಿ ದೇವೇಗೌಡ ಮಾತನಾಡಿದ್ದಾರೆ.

ಪ್ರಜ್ವಲ್‌ ರೇವಣ್ಣ ಈವರೆಗೆ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ನನಗಿರಬಹುದು ಅಥವಾ ಅವರ ಕುಟುಂಬಕ್ಕಿರಬಹುದು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಈ ವಿಚಾರ ಯಾರಿಗೂ ತಿಳಿಯುತ್ತಿಲ್ಲ. ಇದರಿಂದಲೇ ಸರ್ಕಾರ 196 ದೇಶಗಳಿಗೆ ಬ್ಲೂ ಕಾರ್ನರ್‌ ನೋಟಿಸ್ ನೀಡಿದೆ. ಈ ಮೂಲಕ ಅವರು ಸಿಗಬಹುದೇ ಹೊರತು ಅವರ ಕುಟುಂಬಕ್ಕಾಗಲಿ, ರಾಜಕೀಯ ನಾಯಕರಾದ ನಮಗಾಗಲಿ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದರು.

ಎಸ್‌ಐಟಿ ಸರ್ಕಾರ ಹೇಳಿದಂತೆ ತನಿಖೆ ಮಾಡುತ್ತಿದೆ. ಈ ತನಿಖಾ ಸಂಸ್ಥೆ ಮೇಲೆ ನಮಗೆ ನಂಬಿಕೆಯಿಲ್ಲ. ಮುಖ್ಯಮಂತ್ರಿ ಹೇಳಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ವಹಿಸುವುದಿಲ್ಲ ಎಂದಿದ್ದಾರೆ. ಎಸ್‌ಐಟಿ ರಾಜ್ಯ ಸರ್ಕಾರ ಹೇಳಿದಂತೆ ಕೇಳುವುದರಿಂದ ಈ ಪ್ರಕರಣ ರಾಜ್ಯಾದ್ಯಂತ ವ್ಯಾಪಕವಾಗಿ ಹರಡಿದೆ. ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐಗೆ ಪ್ರಕರಣ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

ಇನ್ನು ರಾಜ್ಯಾದ್ಯಂತ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ರೇವಣ್ಣ ಅವರ ಮೇಲೆ ಸುಳ್ಳು ಕಿಡ್ನಾಪ್‌ ಪ್ರಕರಣ ಹಾಕಿ ಬಂಧಿಸಿದ್ದಕ್ಕಾಗಿಯೇ ಹೊರತು ಪ್ರಜ್ವಲ್‌ ಪ್ರಕರಣಕ್ಕಾಗಿ ಅಲ್ಲ ಎಂದು ಸ್ಪಷ್ಟೀಕರಿಸಿದ್ದಾರೆ.