ಮೈಸೂರು : ರಾಮಕೃಷ್ಣ ನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಡಿ.30 ರ ಬದಲಿಗೆ 29ರಂದೇ ನಡೆಸಲಿರುವುದರಿಂದ ಪರಿಷ್ಕೃತ ಸೂಚನೆಯಂತೆ ಸೋಮವಾರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ನಗರದ ಹಲವೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ತೊಣಚಿಕೊಪ್ಪಲು, ಹರಿಹರ ಹೋಟೆಲ್, ಅಮ್ಮ ಕಾಂಪ್ಲೆಕ್ಸ್, ನ್ಯೂಕಾಂತರಾಜ ಅರಸ್ ರಸ್ತೆ, ಆರ್‌ಟಿಟಿಸಿ ಕಾಂಪ್ಲೆಕ್ಸ್, ಅರವಿಂದ ನಗರ, ಕುವೆಂಪು ನಗರ ಎಂ.ಎನ್. ಕೆ ಬ್ಲಾಕ್, ಕುವೆಂಪುನಗರ ಕೆಹೆಚ್‌ಬಿ ಕಾಲೋನಿ, ಅನಿಕೇತನ ರಸ್ತೆ, ಪಡುವಣ ರಸ್ತೆ, ಸರಸ್ವತಿಪುರಂ 1ರಿಂದ 4ನೇ ಮುಖ್ಯರಸ್ತೆ, ವಿಶ್ವಮಾನವ ಜೋಡಿ ರಸ್ತೆ, ಪಂಚಮಂತ್ರ ರಸ್ತೆ, ಎಂ ಬ್ಲಾಕ್ ಲೈಬ್ರರಿ, ಪಾಂಡುರಂಗ ದೇವಸ್ಥಾನ, ವಿವೇಕಾನಂದ ವೃತ್ತ, ವಿವೇಕಾನಂದ ನಗರ, ಇಡಬ್ಲ್ಯೂಎಸ್ ಗಣಪತಿ ದೇವಸ್ಥಾನ, ಎಂಎಲ್‌ಸಿ ವಿಶ್ವನಾಥ್ ಮನೆ ಸುತ್ತಮುತ್ತ, ಕೆನರಾ ಬ್ಯಾಂಕ್, ಬಿಜಿಎಸ್ ಬಾಲ ಜಗತ್ ಶಾಲೆ, ಎಸ್‌ಬಿಎಂ ಕಾಲೋನಿ, ಶಿವ ಟೆಂಪಲ್, ಸೂರ್ಯ ಲೇಔಟ್, ನಿಮಿಷಾಂಬ ಲೇಔಟ್, ಕಂದಾಯ ನಗರ 3ನೇ ಹಂತ, ಗಿರಿಯಪ್ಪ ನಿಂಗೇಗೌಡ ಲೇಔಟ್, ಟೆಂಪಲ್ ಬೆಲ್ ಲೇಔಟ್, ಮಹಾಲಿಂಗೇಶ್ವರ ದೇವಸ್ಥಾನ, ಕಬಿನಿ ಲೇಔಟ್, ಎಸ್‌ಎಂಎಸ್ ಸ್ಕೂಲ್ ಲೇಔಟ್, ಕಂದಾಯ ಲೇಔಟ್, ಹಂಸ ಲೇಔಟ್ 1ನೇ ಹಂತ, ಗಗನ ಶೇಖರ ಲೇಔಟ್, ಹುಲಿನಾರಾಯಣಪ್ಪ ಲೇಔಟ್, ಭವ್ಯಭಾರತಿ ಲೇಔಟ್, ಎಂಡಿಸಿಸಿ ಬ್ಯಾಂಕ್ ಎಂಪ್ಲಾಯಿಸ್ ಲೇಔಟ್, ಟಿ.ಕೆ ಸ್ಟುಡಿಯೋ ಲೇಔಟ್, ಕಂದಾಯ ಲೇಔಟ್ ೨ನೇ ಹಂತ, ತಪೋವನ, ಅನ್ನಪೂರ್ಣ ಲೇಔಟ್, ಎಂಡಿಸಿಸಿ ಲೇಔಟ್, ಶ್ರೀರಾಂಪುರ, ಪ್ರೀತಿ ಲೇಔಟ್, ಡಿವಿಜಿ ಲೇಔಟ್, ಟಿ.ಕೆ.ರಾಮ್ ಲೇಔಟ್, ಚಿದಾನಂದ ಮತ್ತು ರಕ್ಷಾ ಲೇಔಟ್, ಆರ್.ಕೆ. ನಗರ ಕೆ ಬ್ಲಾಕ್, ವಾಸು ಲೇಔಟ್, ಮುಡಾ ಎಂಪ್ಲಾಯಿಸ್ ಲೇಔಟ್, ಮಾಧವ ಪಾರ್ಕ್, ಇ ಮತ್ತು ಎಫ್ ಬ್ಲಾಕ್, ಜನತಾ ನಗರ, ಶಾರಾದಾದೇವಿ ನಗರ, ನಿವೇದಿತಾ ನಗರ, ಬಸವೇಶ್ವರ ನಗರ, ಗಂಗೋತ್ರಿ ಹುಡ್ಕೋ ಲೇಔಟ್, ಸಬ್ ರಿಜಿಸ್ಟಾರ್ ಆಫೀಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಇದನ್ನು ಓದಿ: ಮೈಸೂರು| ಸಿಎಂ ಸಿದ್ದರಾಮಯ್ಯ ಮನೆಗೂ ಸಿಗದ ವಿದ್ಯುತ್ ಸಂಪರ್ಕ: ಕಾರಣ ಇಷ್ಟೇ
ಸೌತ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ. 29ರಂದು ಮೂರನೇ ತ್ರೈಮಾಸಿಕ ನಿರ್ವಹಣೆ ಕಾರ್ಯದ ನಿಮಿತ್ತ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಶ್ರೀರಾಂಪುರ 2ನೇ ಹಂತ, ರಮಾಬಾಯಿನಗರ, ಮಹದೇವಪುರ, ಜಯನಗರ 1, 2ನೇ ಕ್ರಾಸ್, ಪರಸಯ್ಯನಹುಂಡಿ, ಶಿವಪುರ, ಕುವೆಂಪುನಗರ ಕೆ ಬ್ಲಾಕ್, ಅಪೋಲೊ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶಗಳು, ಚಿಕ್ಕಹರದನಹಳ್ಳಿ , ಗೊರೂರು ಗ್ರಾಮ, ಕಳಲವಾಡಿ, ಕೋಟೆಹುಂಡಿ, ಯಡಹಳ್ಳಿ, ರಾಯನಕೆರೆ, ಸರಸ್ವತಿಪುರಂ 1ನೇ ಮುಖ್ಯರಸ್ತೆಯಿಂದ 6ನೇ ಮುಖ್ಯರಸ್ತೆ, ಭಾಗಶಃ ಕೆ.ಜಿ.ಕೊಪ್ಪಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.
ಇನ್ನೂ ಡಿ.30ರಂದು ಕಾಳಿದಾಸ ರಸ್ತೆ, ಯೋಗನರಸಿಂಹ ಸ್ವಾಮಿ ದೇವಸ್ಥಾನದ ಸುತ್ತಮುತ್ತ, ವಿಜಯನಗರ 1ನೇ ಹಂತ ಹಾಗೂ ಭಾರತೀಯ ವಿದ್ಯಾಭವನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಡುವಾರಹಳ್ಳಿ, ವಿನಾಯಕ ನಗರ, ಟೆಂಪಲ್ ರಸ್ತೆ, ಮಹಾರಾಣಿ ಕಾಲೇಜು ಪ್ರದೇಶ, ಆದಿಪಂಪ ರಸ್ತೆ, ವಾಲ್ಮೀಕಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಸುಬ್ರಮಣ್ಯನಗರ, ಭೈರವೇಶ್ವರ ನಗರ, ಹೆಬ್ಬಾಳ್ ಮುಖ್ಯರಸ್ತೆ, ಬಸವನಗುಡಿ ಪಾರ್ಕ್ ಸುತ್ತಮುತ್ತ ಹಾಗೂ ಹೆಬ್ಬಾಳ್ ಮಾರ್ಕೆಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ವಿವಿ ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.





