Mysore
28
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

Power cut: ಜೂ.30 ರಂದು ಮೈಸೂರಿನ ಈ ಪ್ರದೇಶದಲ್ಲಿ ವಿದ್ಯುತ್‌ ಇರಲ್ಲ

ಮೈಸೂರು: ನಗರದ ಹಲವೆಡೆ ವಿದ್ಯುತ್‌ ಕಾರ್ಯನಿರ್ವಹಣಾ ಕಾರ್ಯಾ ಕೈಗೊಂಡಿರುವುದರಿಂದ ಜೂನ್‌ 30 ರ ಬೆಳಗ್ಗೆ 10 ರಿಂದ ಸಂಜೆ 5:30 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ. ಸಾರ್ವಜನಿಕರು ಹಾಗೂ ಕೈಗಾರಿಕೋದ್ಯಮಿಗಳು ಸಹಕರಿಸುವಂತೆ ಚೆಸ್ಕಾಂ ತಿಳಿಸಿದೆ.

ದೊಡ್ಡಕೆರೆ ಮೈದಾನ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕ.ವಿ.ಪ್ರ.ನಿ.ನಿ. ವತಿಯಿಂದ ಮೊದಲನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯ?
ರಾಮಾನುಜ ರಸ್ತೆ 01 ರಿಂದ 09ನೇ ಕ್ರಾಸ್ ವರೆಗೆ, ಹೊಸಬಂಡಿಕೇರಿ, ಜೆ.ಎಸ್.ಎಸ್. ಆಸ್ಪತ್ರೆ, ಅಗ್ರಹಾರ, ಬಸವೇಶ್ವರ ರಸ್ತೆ, ಚಾಮುಂಡಿಪುರoನ ಹಲವು ಭಾಗಗಳು, ತ್ಯಾಗರಾಜ ರಸ್ತೆ, ಚಾಮುಂಡಿಬೆಟ್ಟ ಮತ್ತು ಪಾದ, ಗುಂಡುರಾವ್ ನಗರ, ದತ್ತನಗರ, ಮುನೇಶ್ವರನಗರ, ಗೌರಿಶಂಕರನಗರ.

ಇಲ್ಲೂ ವಿದ್ಯುತ್‌ ಇರಲ್ಲ..
ನಂಜನಗೂಡು ಟೋಲ್ ಗೇಟ್, ತಾವರೆಕೆರೆ, ಜಾಕಿ ಕ್ವಾಟ್ರಸ್, ರೇಸ್ ಕೋರ್ಸ್ ಹಿಂಭಾಗ, ಸಬರ್ಬ್ ಬಸ್ ನಿಲ್ದಾಣ, ನಜರ್‌ಬಾದ್, ಇಟ್ಟಿಗೆಗೂಡು, ಮೃಗಾಲಯದ ಸುತ್ತ-ಮುತ್ತ, ಸರ್ಕಾರಿ ಅಥಿತಿ ಗೃಹ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳು.

ಮುಂದುವರೆದು ತಾಲ್ಲೂಕು ಕಛೇರಿ, ಡಿ. ದೇವರಾಜ ಅರಸು ರಸ್ತೆ, ಬಿ.ಎನ್. ರಸ್ತೆ, ಚಾಮುಂಡಿಬೆಟ್ಟ, ಸಿದ್ದಾರ್ಥನಗರ, ಕುರುಬಾರಹಳ್ಳಿ, ಜೆ.ಸಿ. ನಗರ, ಕೆ.ಸಿ ನಗರ, ಜೆ.ಎಸ್.ಎಸ್ ಆಯುರ್ವೇದಿಕ್ ಸುತ್ತ-ಮುತ್ತ, ಅರಮನೆ ಸುತ್ತ-ಮುತ್ತಲಿನ ಪ್ರದೇಶಗಳು ಹಾಗೂ ಶ್ರೀ ಹರ್ಷ ರಸ್ತೆ, ಸಯ್ಯಾಜೀರಾವ್ ರಸ್ತೆ, ಇರ್ವೀನ್ ರಸ್ತೆ ಸುತ್ತ-ಮುತ್ತಲಿನ ಪ್ರದೇಶಗಳು, ಧನ್ವಂತರಿ ರಸ್ತೆ ಹಾಗೂ ಶಿವರಾಂಪೇಟೆ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಮತ್ತು ಕೈಗಾರಿಕೋಧ್ಯಮಿಗಳು ಸಹಕರಿಸಬೇಕು ಎಂದು ಚಾ.ವಿ.ಸ.ನಿ.ನಿ.ಯ ನ.ರಾ.ಮೊಹಲ್ಲಾ ವಿಭಾಗದ ಕಾರ್ಯ ಮತ್ತು ಪಾಲನೆಯ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags: