Mysore
21
overcast clouds
Light
Dark

ಎಸ್‌ಎಸ್‌ಎಲ್‌ಸಿ ಮರು ಮೌಲ್ಯಮಾಪನದಲ್ಲಿ ಬಂತು ಹೆಚ್ಚು ಅಂಕ; ಆದ್ರೂ ಸಿಗಲಿಲ್ಲ ಸೀಟ್!

ಮೈಸೂರು: ಮೌಲ್ಯಮಾಪಕರು ಮಾಡಿದ ಯಡವಟ್ಟಿನಿಂದಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವಿದ್ಯಾರ್ಥಿನಿಯೊಬ್ಬರು ಸಂಕಷ್ಟದಲ್ಲಿ ಸಿಲುಕಿರುವ ಘಟನೆ ಜಿಲ್ಲೆಯ ತಿ. ನರಸೀಪುರ ತಾಲೂಕಿನ ಕೊಡಗಳ್ಳಿ ಗ್ರಾಮದಲ್ಲಿ ನಡೆದಿದೆ.

ಈ ಸಂಬಂಧ ನಗರದಲ್ಲಿ ಶುಕ್ರವಾರ(ಜೂನ್‌.7) ಸುದ್ದಿಗೋಷ್ಠಿ ನಡೆಸಿ ವಿದ್ಯಾರ್ಥಿನಿ ಕೆ.ಎಸ್.ಶ್ರಾವ್ಯ, ಪೋಷಕರಾದ ಕೆ.ಎನ್.ಶ್ರೀನಿವಾಸ್ ಮತ್ತು ಸುಮಾ ಶ್ರಿನಿವಾಸ ಮಾತನಾಡಿದರು.

ಕಾವ್ಯ ಪೋಷಕರಾದ ಶ್ರೀನಿವಾಸ ಮಾತನಾಡಿ, ಮಂಡ್ಯ ಜಿಲ್ಲೆಯ ಅರೇಕೆರೆಯ ಜೀವೋದಯ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನಲ್ಲಿ ತಮ್ಮ ಮಗಳು ವ್ಯಾಸಂಗ ಮಾಡುತ್ತಿದ್ದಳು. ಪರೀಕ್ಷೆ ವೇಳೆ ಉತ್ತಮ ಅಂಕ ಗಳಿಸುವ ಭರವಸೆ ಇದ್ದ ವಿದ್ಯಾರ್ಥಿಗೆ ಉತ್ತೀರ್ಣಳಾದ ಬಳಿಕ ಬಂದ ಅಂಕಗಳಲ್ಲಿ ಅಸಮಾಧಾನ ಇತ್ತು. ಇದರಿಂದಾಗಿ ಮರು ಮೌಲ್ಯಮಾಪನಕ್ಕೆ ಹಾಕಲಾಯಿತು. ಮರು ಮೌಲ್ಯಮಾಪನ ನಂತರ ವಿದ್ಯಾರ್ಥಿಗೆ 545 ಅಂಕ ಪಡೆದಿದ್ದ ವಿದ್ಯಾರ್ಥಿನಿ, ಮರು ಮೌಲ್ಯ ಮಾಪನದಲ್ಲಿ 606 ಅಂಕ ಸಿಕ್ಕಿತು.

ಮೊದಲ ಫಲಿತಾಂಶದಲ್ಲಿ ಶೇ.87 ಫಲಿತಾಂಶ ಬಂದಿದ್ದರೆ, ಮರು ಮೌಲ್ಯಮಾಪನದ ನಂತರ ಶೇ.97ರಷ್ಟು ಫಲಿತಾಂಶ ದೊರೆತಿದೆ. ಈ ಮೌಲ್ಯಮಾಪನದಲ್ಲಿ ಅಂಕಗಳು ತಪ್ಪಾಗಿ ಬರಲು ಮೌಲ್ಯಮಾಪನ ಸಿಬ್ಬಂದಿಯ ಯಡವಟ್ಟುಗಳೇ ಕಾರಣ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ನಮ್ಮ ಮಗಳು ಇಚ್ಛೆಪಟ್ಟ ಕಾಲೇಜಿನಲ್ಲಿ ಎಂದು ಒತ್ತಾಯಿಸಿದರು.

ಮೌಲ್ಯ ಮಾಪಕರು ಮಾಡಿದ ಎಡವಟ್ಟಿನಿಂದಾಗಿ ನಮ್ಮ ಮಗಳ ಭವಿಷ್ಯಕ್ಕೆ ತೊಂದರೆಯಾಗಿದೆ ಎಂದು ವಿದ್ಯಾರ್ಥಿನಿ ತಂದೆ ಅಳಲು ತೋಡಿಕೊಂಡಿದ್ದಾರೆ.

Tags: