Mysore
22
overcast clouds

Social Media

ಭಾನುವಾರ, 13 ಜುಲೈ 2025
Light
Dark

ಅತ್ಯಾಧುನಿಕ ನ್ಯೂರೋ ನ್ಯಾವಿಗೇಷನ್‌ ಸೇವೆ ಪ್ರಾರಂಭಿಸಿದ ನಾರಾಯಣ ಆಸ್ಪತ್ರೆ

ಮೈಸೂರು: ನಗರದ ನಾರಾಯಣ ಆಸ್ಪತ್ರೆಯಲ್ಲಿ ಅತ್ಯಾಧುನಿಕ ನ್ಯೂರೋ ನ್ಯಾವಿಗೇಷನ್ ಸಿಸ್ಟಂ ಸೇವೆಯನ್ನು ಆರಂಭಿಸಲಾಗಿದ್ದು, ಇದರಿಂದಾಗಿ ರೋಗಿಯ ಮೆದುಳಿನಲ್ಲಿರುವ ಗಡ್ಡೆಯನ್ನು ಅತಿ ನಿಖರವಾಗಿ ಶಸಚಿಕಿತ್ಸೆ ಮೂಲಕ ತೆಗೆದು ಹಾಕಲು ಸಾಧ್ಯವಾಗುತ್ತಿದೆ. ಈ ಸುಧಾರಿತ ತಂತ್ರಜ್ಞಾನದ ಸೇವೆಯನ್ನು ಮೈಸೂರು ಭಾಗದಲ್ಲಿ ಏಕೈಕ ಆಸ್ಪತ್ರೆ ನಮ್ಮದು ಎಂಬ ಹಿರಿಮೆ ಇದೆ ಎಂದು ಆಸ್ಪತ್ರೆಯ ಕ್ಲಿನಿಕಲ್ ನಿರ್ದೇಶಕ ಡಾ.ಎಂ.ಎನ್.ರವಿ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆದುಳಿನ ಶಸಚಿಕಿತ್ಸೆಗೆ ಸಿಟಿ ಸ್ಕ್ಯಾನ್ ಹಾಗೂ ಎಂಆರ್‌ಐ ಸ್ಕ್ಯಾನ್ ಚಿತ್ರಗಳನ್ನು ಬಳಸುವುದು ಸಾಮಾನ್ಯ ಸಂಗತಿ. ಆದರೆ, ಅವುಗಳನ್ನು ಮುಂದಿಟ್ಟುಕೊಅಡು ವೈದ್ಯರು ತಮ್ಮ ಅನುಭವದ ಆಧಾರದ ಮೇಲೆ ಮೆದುಳಿನ ಯಾವ ಭಾಗದಲ್ಲಿ ಗಡ್ಡೆ ಇದೆ, ಇಷ್ಟೇ ಗಾತ್ರzಗಿದೆ ಎಂದು ಅಂದಾಜಿನ ಮೇಲೆ ನಿರ್ಧರಿಸಿ ಶಸಚಿಕಿತ್ಸೆ ನಡೆಸಬೇಕಾಗಿತ್ತು.

ಆದರೆ ಈ ನೂತನ ಸಾಧನವು ಸಿಟಿ ಸ್ಕ್ಯಾನ್ ಹಾಗೂ ಎಂಆರ್‌ಐ ಮಾಹಿತಿಯನ್ನು ತನ್ನಲ್ಲಿ ಅಳವಡಿಸಿಕೊಂಡು, ಶಸಚಿಕಿತ್ಸೆ ವೇಳೆ ಮಾರ್ಗದರ್ಶನ ನೀಡಲಿದೆ. ಇದರಿಂದಾಗಿ ಮೆದುಳಿನಲ್ಲಿರುವ ಗಡ್ಡೆಯನ್ನು ಅತಿ ಕಡಿಮೆ ಛೇದನದೊಡನೆ ಪೂರ್ಣ ಪ್ರಮಾಣದಲ್ಲಿ ಕಡಿಮೆ ಅವಧಿಯಲ್ಲಿ ತೆಗೆದುಹಾಕಬಹುದಾಗಿದೆ. ಶಸಚಿಕಿತ್ಸೆ ಬಳಿಕ ರೋಗಿಯು ಬಹಳ ಬೇಗ ಚೇತರಿಸಿಕೊಳ್ಳುತ್ತಾನೆ. ಈ ಸಾಧನವನ್ನು ಬೆನ್ನುಮೂಳೆಯಂತಹ ಸಂಕೀರ್ಣ ಶಸಚಿಕಿತ್ಸೆಗೂ ಬಳಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.

ನರರೋಗ ಶಸಚಿಕಿತ್ಸಾ ತಜ್ಞರಾದ ಡಾ. ಗೌತಮ್ ಕುಗಾಟಿ ಹಾಗೂ ಡಾ.ಎ.ಎಚ್.ಹರ್ಷ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Tags:
error: Content is protected !!