Mysore
23
clear sky

Social Media

ಭಾನುವಾರ, 19 ಏಪ್ರಿಲ 2026
Light
Dark

ನಂಜನಗೂಡು | ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ; ವ್ಯಕ್ತಿಯೋರ್ವ ಸಾವು

ಮೈಸೂರು: ನಂಜನಗೂಡಿನ ದೇವಿರಮ್ಮನಹಳ್ಳಿ ಸಿಗ್ನಲ್ ಬಳಿ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಬೈಕ್‌ಗೆ ನಡುವೆ ಡಿಕ್ಕಿಯಾಗಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.

ಸಿಂಧುವಳ್ಳಿ ಗ್ರಾಮದ ಬೊಮ್ಮೇಗೌಡ (70) ಮೃತರಾದವರು. ಸೋಮವಾರ ಸಂಜೆ ಸಿಂಧುವಳ್ಳಿಯಿಂದ ನಂಜನಗೂಡು ಪಟ್ಟಣಕ್ಕೆ ತಮ್ಮ ಮಗನ ಜೊತೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ದೇವಿರಮ್ಮನಳ್ಳಿ ಸಿಗ್ನಲ್ ಬಳಿ ಚಲಾಯಿಸುವಾಗ ಇಂಬದಿಯಿಂದ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಬೈಕ್ ಹ್ಯಾಂಡಲ್‌ಗೆ ಸೋಕಿದೆ. ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಇಬ್ಬದಿ ಕುಳಿತಿದ್ದ ಬೊಮ್ಮೇಗೌಡ ನೆಲಕ್ಕೆ ಬಿದ್ದಾಗ ಬಸ್ ಚಕ್ರಗಳ ಕಾಲಿನ ಮೇಲೆ ಹರಿದಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದ್ಯೊಯ್ದರು ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ನಂಜನಗೂಡು ಸಂಚಾರಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಸಾರಿಗೆ ಬಸ್ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಬೈಕ್‌ನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಮಹೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Tags:
error: Content is protected !!