Mysore
27
scattered clouds

Social Media

ಮಂಗಳವಾರ, 17 ಫೆಬ್ರವರಿ 2026
Light
Dark

ನಂಜನಗೂಡು | ಈಜಲು ಹೋಗಿದ್ದ ಮಕ್ಕಳು ನೀರುಪಾಲು

ನಂಜನಗೂಡು : ಕೆರೆಯಲ್ಲಿ ಈಜಲು ಹೋಗಿದ್ದ ಮಕ್ಕಳು ನೀರುಪಾಲಾಗಿರುವ ಘಟನೆ ತಾಲ್ಲೂಕಿನ ತಾಲೂಕಿನ ಬದನವಾಳು ಗ್ರಾಮದಲ್ಲಿ ಶನಿವಾರ ಘಟನೆ‌.

ಮೋಹಿತ್ (8) ಆರ್ಯ (9) ಮೃತ ದುರ್ದೈವಿಗಳು. ಬದನವಾಳು ಗ್ರಾಮದ ಮಹದೇವಸ್ವಾಮಿ ಎಂಬುವವರ ಪುತ್ರ ಆರ್ಯ (9). ಗ್ರಾಮದ ಮಹದೇವಸ್ವಾಮಿ ಎನ್ ಎಂಬುವರ ಪುತ್ರ ಮೋಹಿತ್ (8) ನೀರಿನಲ್ಲಿ ಮುಳುಗಿ ಸಾವನಪ್ಪಿದವರು.

ಇದನ್ನು ಓದಿ: ಗುಂಡ್ಲುಪೇಟೆ | ಚಿರತೆ ದಾಳಿಗೆ ಕರು ಸಾವು

ಬದನವಾಳು ಗ್ರಾಮದಲ್ಲಿರುವ ಕೆರೆಗೆ ಈಜಲು ಹೋಗಿದ್ದ ಮೋಹಿತ್ ಮತ್ತು ಆರ್ಯ‌. ಕೆರೆ ಬಳಿ ಬಟ್ಟೆಯನ್ನ ಬಿಚ್ಚಿ ಈಜಲು ಇಳಿದಿದ್ದಾರೆ. ಈ ವೇಳೆ ಕೆರೆಯ ಸುಳಿಗೆ ಸಿಲುಕಿ ಮೇಲೆ ಬಾರದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮೋಹಿತ್ ಎಂಬ ಬಾಲಕ ಮೂರನೇ ತರಗತಿ, ಆರ್ಯ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಕವಲಂದೆ ಪೊಲೀಸ್ ಪಿಎಸ್ಐ ಬಸವರಾಜು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಮೃತ ಮಕ್ಕಳ ಎರಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Tags:
error: Content is protected !!