ನಂಜನಗೂಡು : ಎರಡು ತಲೆ, ನಾಲ್ಕು ಕಣ್ಣು, ಎರಡು ಕಿವಿ ಹಾಗೂ ಎರಡು ಬಾಯಿ ಇರುವ ಮೇಕೆ ಮರಿಯೊಂದು ಜನಿಸಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಈ ವಿಚಿತ್ರ ಮೇಕೆ ಕಂಡು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಜನ ತಂಡೋಪತಂಡವಾಗಿ ಮೇಕೆಮರಿಯನ್ನು ನೋಡಲು ಆಗಮಿಸುತ್ತಿದ್ದಾರೆ.
ಕುರಹಟ್ಟಿ ಗ್ರಾಮದ ರೈತ ರವೀಶ್ ಎಂಬುವರು ತಮ್ಮ ಮನೆಯಲ್ಲಿ ಮೇಕೆಗಳನ್ನು ಪಾಲನೆ ಮಾಡುತ್ತಿದ್ದು, ಮೇಕೆಯೊಂದು ಎರಡು ಮರಿಗಳಿಗೆ ಜನ್ಮ ನೀಡಿದೆ. ಈ ಪೈಕಿ ಒಂದು ಮೇಕೆ ಮರಿಯು ಸಾಮಾನ್ಯವಾಗಿ ಜನಿಸಿದರೆ, ಮತ್ತೊಂದು ಮರಿಯೂ ವಿತ್ರವಾಗಿ ಜನಿಸಿದೆ. ಎರಡು ತಲೆ, ನಾಲ್ಕು ಕಣ್ಣು, ಎರಡು ಕಿವಿ, ಎರಡು ಬಾಯಿಯೊಂದಿಗೆ ಜನಿಸಿದ್ದು, ಇದನ್ನು ಕಂಡು ಮಾಲೀಕರು ಸೇರಿದಂತೆ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ವಿಚಿತ್ರವಾಗಿ ಜನಿಸಿದರೂ ಅದರ ದೇಹ ಮಾತ್ರ ಸಾಮಾನ್ಯವಾಗಿದೆ. ಜೊತೆಗೆ ಸಾಮಾನ್ಯ ಮೇಕೆಯಂತೆ ಆರೋಗ್ಯವಾಗಿದೆ. ಹಾಲು ಕುಡಿಯುವಾಗ ಎರಡು ಬಾಯಿಯಿಂದಲೂ ಹಾಲು ಕುಡಿಯುತ್ತಿದೆ ಇಂತಹದ್ದೊಂದು ವಿಚಿತ್ರ ಮೇಕೆ ಜನಿಸಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಈ ಮೇಕೆಮರಿ ನೋಡಲು ಜನ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ ಎಂದು ಮೇಕೆ ಮಾಲೀಕ ರವೀಶ್ ಹೇಳಿದರು.





