ನಂಜನಗೂಡು : ತಾಯಿ ಹುಲಿಯಿಂದ ಬೇರ್ಪಡೆಯಾಗಿದ್ದ ಒಂದುವರೆ ವರ್ಷದ ಮರಿ ಹುಲಿ ಸೆರೆಯಾಗಿದೆ. ತಾಲೂಕಿನ ಹೊಸ ವೀಡು ಗ್ರಾಮದ ಸೋಮೇಶ್ ಎಂಬುವರ ಜಮೀನಿನ ಬಳಿ ಸೆರೆಯಾಗಿದೆ.
ಕಳೆದ ವಾರ ಈರೇಗೌಡನ ಹುಂಡಿ ಗ್ರಾಮದ ಬಳಿ ತಾಯಿ ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ಎರಡು ಮರಿ ಹುಲಿಗಳ ಜೊತೆ ಬಾರಿ ಗಾತ್ರದ ತಾಯಿ ಹುಲಿ ಹಿರೇಗೌಡನ ಹುಂಡಿ ಸುತ್ತಮುತ್ತ ಕಾಣಿಸಿಕೊಂಡು ಗ್ರಾಮಸ್ಥರ ನಿದ್ರೆಗೆಡಿಸಿತ್ತು.
ಕೃಷಿ ಜಮೀನುಗಳಿಗೆ ರೈತರು ತೆರಳಲು ಆತಂಕ ವ್ಯಕ್ತಪಡಿಸುತ್ತಿದ್ದರು. ನಂಜನಗೂಡಿನ ಶಾಸಕ ದರ್ಶನ್ ಧ್ರುವನಾರಾಯಣ್ ಕಳೆದ ಎರಡು ದಿನಗಳ ಹಿಂದೆ ಅರಣ್ಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೆರೆ ಹಿಡಿಯುವಂತೆ ಖಡಕ್ ಸೂಚನೆ ನೀಡಿದ್ದರು.
ಅಲರ್ಟ್ ಆದ ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳು ದಸರಾ ಆನೆಗಳಾದ ಭೀಮ,ಮಹೇಂದ್ರ, ಶ್ರೀಕಂಠ ಮತ್ತು ಲಕ್ಷ್ಮಣ ಆನೆಗಳ ಮೂಲಕ ಕಾರ್ಯಾಚರಣೆ ಆರಂಭಿಸಿದ್ದರು.
ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಸಿಎಫ್ ಪ್ರಭಾಕರನ್ ಹೆಡಿಯಾಲ ಎಸಿಎಫ್ ಪರಮೇಶ್ ಆರ್‌ಎಫ್ಒ ವಿವೇಕ್ ನೇತೃತ್ವದಲ್ಲಿ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.





