Mysore
25
overcast clouds
Light
Dark

ನಾಲ್ವಡಿ ಅವರ ಜಯಂತಿ ಅದ್ದೂಯಾಗಿ ಆಚರಣೆಯಾಗಬೇಕು : ಪ್ರೊ.ನಂಜರಾಜ ಅರಸು

ಮೈಸೂರು : ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜಯಂತಿ ಅದ್ದೂರಿಯಿಂದ ಆಚರಣೆಯಾಗಬೇಕು ಎಂದು ಪ್ರೊ.ನಂಜನರಾಜ ಅರಸು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿ ಹಿನ್ನಲೆ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ ಸುದರ್ಶನ್ ಅವರ ನೇತೃತ್ವದಲ್ಲಿ ಅವರ ಕಚೇರಿಯಲ್ಲಿ  ಇಂದು ಪೂರ್ವಭಾವಿ ಸಭೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಅವರು,  ನಾಲ್ವಡಿ ಅವರ ಜಯಂತಿ ಅರ್ಥಪೂರ್ಣವಾಗಿ ಮಾಡಬೇಕು ನಾಲ್ವಡಿ ಅವರು ಎಲ್ಲಾ ಜನರಿಗೆ ಸೇರಿದ್ದವರು ಮುಂದಿನ ಪೀಳಿಗೆಗೆ ಅವರ ಕೊಡುಗೆ ತಲುಪಬೇಕು ಅವರ ಕೊಡುಗೆಯ ಕುರಿತು ಕಿರುಹೊತ್ತಿಗೆ ಹಲವು ವರ್ಷಗಳ ಹಿಂದೆ ಮೈಸೂರು ಮಹಾನಗರ ಪಾಲಿಕೆ ಅದನ್ನು ಮುದ್ರಿಸಿ ಹಂಚಿದೆ ಅದೇ ರೀತಿ ಎರಡು ಅಥವಾ ಮೂರು ಸಾವಿರ ಪ್ರತಿ ಶಾಲಾ ಮಕ್ಕಳಿಗೆ ಹಂಚಬೇಕು ಹಾಗೂ ರಾಜ್ಯ ಮಟ್ಟದ ಕಾರ್ಯಕ್ರಮ ಈ ಭಾರಿ ಮೈಸೂರಲ್ಲೆ ಆಗಿ ಅದರ ಅನುಧಾನ ವಿಭಜಿಸಿ ತಾಲೂಕು ಮಟ್ಟದಲ್ಲಿ ಜಯಂತಿ ಮಾಡಲು ಕ್ರಮ ಕೈಗೊಳ್ಳಬೇಕು ಸಾಧ್ಯವಾದರೆ ಮುಖ್ಯ ಮಂತ್ರಿಗಳ ದಿನಾಂಕದಂದೇ ಕಾರ್ಯಕ್ರಮ ಮಾಡಬೇಕು ಎಂಬ ಉತ್ತಮ ಎಂದು ಸಲಹೆ ನೀಡಿದರು.

ಬಳಿಕ ಮಾತನಾಡಿದ ಕನ್ನಡಪರ ಹೋರಾಟಗಾರರಾದ ಅರವಿಂದ್ ಶರ್ಮ, ನಾಲ್ವಡಿ ಜಯಂತಿ ದಿನದಂದು ಅವರ ಕೊಡುಗೆಯ ಕಿರುಪರಿಚಯ ಮಕ್ಕಳಿಗೆ ಪ್ರಾರ್ಥನಾ ಸಮಯದಲ್ಲಿ ತಿಳಿಸಲು ಮತ್ತು ನಾಲ್ವಡಿ ಅವರ ಭಾವಚಿತ್ರ ಕಡ್ಡಾಯ ಹಾಕಲು ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗು ಖಾಸಗಿ ಶಾಲೆ ಕಾಲೇಜಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು .

ಎಲ್ಲರ ಮನವಿ ಕೇಳಿದ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ ಸುದರ್ಶನ್‌,  ಜಿಲ್ಲಾಧಿಕಾರಿಗಳು ಚುನಾವಣಾಧಿಕಾರಿಗಳಾಗಿರುವ ಕಾರಣ ಅವರ ಉಪಸ್ಥಿತಿಯಲ್ಲಿ ಸಭೆ ಮಾಡಲು ಸಾಧ್ಯವಿಲ್ಲ ಆದ್ದರಿಂದ ತಮ್ಮ ಸಲಹೆಗಳನ್ನು ಕ್ರೂಡೀಕರಿಸಿ ಅಗತ್ಯ ಕ್ರಮಕ್ಕೆ ಅವರ ಗಮನಕ್ಕೆ ತರುತ್ತೇನೆ ಎಂದರು.

ನಾಲ್ವಡಿ ಜಯಂತಿ ದಿನ ಮತ ಎಣಿಕೆ ಇರುವುದರಿಂದ ಅಂದು ಸಾಂಕೇತಿಕವಾಗಿ ಪುಷ್ಪಾರ್ಚನೆ ಮಾಡಬೇಕು ನಂತರದ ದಿನದಲ್ಲಿ ಮುಖ್ಯಮಂತ್ರಿಯ ದಿನಾಂಕ ತಿಳಿದು ಅದ್ದೂರಿಯಾಗಿ ಆಚರಿಸಬೇಕೆಂದು ಸಭೆಯಲ್ಲಿ ಎಲ್ಲರೂ ಒಕ್ಕೊರಲಿನಿಂದ ಅಭಿಪ್ರಾಯ ತಿಳಿಸಿದರು.

ಈ ಸಭೆಯಲ್ಲಿ ಶ್ರೀಧರ್ ರಾಜೇ ಅರಸ್ , ಯಮುನಾ , ಮಹದೇವು , ನಂಜುಂಡರಾಜ ಅರಸ್ , ಶ್ರೀಕಾಂತ ರಾಜೇ ಅರಸ್ , ಶರತ್ ಅರಸ್ , ಚಂದ್ರಚೂಡ ರಾಜೆ ಅರಸ್ ಇತರರು ಭಾಗವಹಿಸಿದ್ದರು.