Mysore
23
broken clouds
Light
Dark

ನಾಗಮಂಗಲ ಗಲಭೆ ಪ್ರಕರಣ: ಸಹಜ ಸ್ಥಿತಿಯತ್ತ ಜನಜೀವನ

ನಾಗಮಂಗಲ: ನಾಗಮಂಗಲ ಪಟ್ಟಣದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಸಂಭವಿಸಿದ್ದ ಗಲಭೆಯಿಂದ ಉಂಟಾಗಿದ್ದ ಉದ್ವಿಗ್ನ ವಾತಾವರಣ ತಿಳಿಗೊಂಡಿದೆ.

ಘಟನೆ ನಡೆದ ದಿನದಿಂದಲೂ ಬಂದ್‌ ಆಗಿದ್ದ ಅಂಗಡಿಗಳು ನಿನ್ನೆ ಶೇಕಡಾ.50ರಷ್ಟು ತೆರೆದಿವೆ.

ಆತಂಕದ ಕಾರ್ಮೋಡದ ನಡುವೆಯೂ ವ್ಯಾಪಾರಿಗಳು ವಹಿವಾಟು ನಡೆಸಿದ್ದು, ದಿನಸಿ, ಬೇಕರಿ, ಹಾಲು, ಹಣ್ಣು-ಹೂವು, ಮೊಬೈಲ್‌ ಅಂಗಡಿಗಳು ಸೇರಿದಂತೆ ವಿವಿಧ ವಾಣಿಜ್ಯ ಮಳಿಗೆಗಳು ತೆರೆದಿವೆ.

ಎಲ್ಲಾ ಆತಂಕಗಳನ್ನು ಬಿಟ್ಟು ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು ಮನೆಯಿಂದ ಹೊರ ಬಂದಿದ್ದಾರೆ.

ಇನ್ನು ತರಗತಿಗಳು ಕೂಡ ಓಪನ್‌ ಆಗಿದ್ದು, ಕೆಎಸ್‌ಆರ್‌ಟಿಸಿ ಬಸ್‌ಗಳು ಕೂಡ ಸಂಚಾರ ಮಾಡಿವೆ.

ಇನ್ನು ಸಾರ್ವಜನಿಕರ ಆತಂಕ ನಿವಾರಣೆ ಮಾಡಲು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರ ನೇತೃತ್ವದಲ್ಲಿ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆದಿದೆ.

ಈ ಹಿನ್ನೆಲೆಯಲ್ಲಿ ನಾಗಮಂಗಲ ಪಟ್ಟಣದಲ್ಲಿ ಜನಜೀವನ ಎಂದಿನಂತೆ ಇದ್ದು, ಆತಂಕದಿಂದ ಜನತೆ ಹೊರ ಬಂದಿದ್ದಾರೆ ಎನ್ನಲಾಗಿದೆ.