Mysore
23
broken clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಮೈಸೂರು ರಂಗಾಯಣ | ಜೂ.29 ರಿಂದ ಸಿಜಿಕೆ ನೆನಪಿನ ಗ್ರೀಷ್ಮ ರಂಗೋತ್ಸವ

Mysuru Rangayana | Summer Theatre Festival in Memory of S.G. K. from June 29

ಮೈಸೂರು : ಪ್ರತಿಬಾರಿಯಂತೆ ಈ ಬಾರಿಯೂ ರಂಗಾಯಣವು ಸಿಜಿಕೆ ನೆನಪಿನಲ್ಲಿ ಹವ್ಯಾಸಿ ರಂಗತಂಡಗಳನ್ನು ಆಹ್ವಾನಿಸಿ ‘ಗ್ರೀಷ್ಮ ರಂಗೋತ್ಸವ-25’ ಅನ್ನು ಆಯೋಜಿಸುತ್ತಿದೆ ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ತಿಳಿಸಿದರು.

ರಂಗಾಯಣದ ಬಿ.ವಿ.ಕಾರಂತ ರಂಗ ಚಾವಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಜೂ.೨೯ರಂದು ಸಂಜೆ ೬ ಗಂಟೆಗೆ ಭೂಮಿಗೀತ ರಂಗಮಂದಿರದಲ್ಲಿ ಏರ್ಪಡಿಸಿರುವ ಗ್ರೀಷ್ಮ ರಂಗೋತ್ಸವವನ್ನು ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ಧನ್ (ಜನ್ನಿ) ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ರಂಗಸಮಾಜದ ಸದಸ್ಯ ಎಚ್.ಎಸ್.ಸುರೇಶ್‌ಬಾಬು ಹಾಜರಲಿದ್ದಾರೆ. ಜೂ.೨೯ರಿಂದ ಆ.೧೦ರವರೆಗೆ ಪ್ರತಿ ಭಾನುವಾರ ಹವ್ಯಾಸಿ ಕಲಾತಂಡದಿಂದ ಒಂದೊಂದು ನಾಟಕ ಪ್ರದರ್ಶನ ಇರಲಿದೆ,” ಎಂದು ತಿಳಿಸಿದರು.

“ರಂಗಾಯಣ ಹಾಗೂ ಹವ್ಯಾಸಿ ರಂಗತಂಡಗಳ ಬೆಸುಗೆಯಾಗಿ ಗ್ರೀಷ್ಮ ರಂಗೋತ್ಸವ ಪ್ರತಿವರ್ಷ ನಡೆದುಕೊಂಡು ಬರುತ್ತಿದೆ. ಮೈಸೂರು, ಮಂಡ್ಯ ಹಾಗೂ ಕೇರಳ ಸೇರಿದಂತೆ ಒಟ್ಟು ಏಳು ನಾಟಕಗಳು ಪ್ರದರ್ಶನ ಕಾಣಲಿದ್ದು, ಕುವೆಂಪು ಅವರ ರಚನೆಯ ಮಂಜುನಾಥ್ ಭ್ಯಾಟೆ ನಿರ್ದೇಶನದ ನೇಪಥ್ಯ ರಂಗತಂಡ ಪ್ರಸ್ತುತಪಡಿಸುವ ‘ಸ್ಮಶಾನ ಕುರುಕ್ಷೇತ್ರ’ ನಾಟಕದ ಮೂಲಕ ಗ್ರೀಷ್ಮ ರಂಗೋತ್ಸವಕ್ಕೆ ಚಾಲನೆ ಸಿಗಲಿದೆ,” ಎಂದು ತಿಳಿಸಿದರು.

ರಂಗಸಮಾಜದ ಸದಸ್ಯ ಎಚ್.ಎಸ್.ಸುರೇಶ್ ಬಾಬು, ಗ್ರೀಷ್ಮ ರಂಗೋತ್ಸವ -೨೦೨೫ರ ಸಂಚಾಲಕ ಅರಸೀಕೆರೆ ಯೋಗಾನಂದ ಇದ್ದರು.

ದಿನಾಂಕ ನಾಟಕ/ತಂಡ ನಿರ್ದೇಶನ

ಜೂ.೨೯ ಸ್ಮಶಾನ ಕುರುಕ್ಷೇತ್ರ ಮಂಜುನಾಥ್ ಭ್ಯಾಟೆ
ನೇಪಥ್ಯ ರಂಗತಂಡ

ಜು.೬ ವಾರ್ಡ್ ನಂ.೦೬ ಮೈಮ್ ರಮೇಶ್
ಜಿಪಿಐಇಆರ್, ಮೈಸೂರು

ಜು.೧೩ ಅಹಲ್ಯ ಬಿ.ಡಿ. ಯತೀಶ್ ಎನ್.ಕೊಳ್ಳೆಗಾಲ
ವರ್ಕ್‌ಶಾಪ್ ಇನ್ ಮೈಸೂರು ಫಾರ್ ಥಿಯೇಟರ್

ಜು.೨೦ ಪರಮೇಶಿ ಪ್ರೇಮ ಪ್ರಸಂಗ ರವಿಪ್ರಸಾದ್
ರಂಗವಲ್ಲಿ, ಮೈಸೂರು

ಜು.೨೭ ಕಳಸೂತ್ರ ಎಚ್.ಎಸ್.ಸುರೇಶ್‌ಬಾಬು
ಅಭಿಯಂತರರು

ಆ.೩ ನಿತ್ಯ ಸಚಿವ ಪ್ರಮೋದ್ ಶಿಗ್ಗಾಂವ್
ಕರ್ನಾಟಕ ಸಂಘ ಮಂಡ್ಯ

ಆ.೧೦ ಕುಹೂ (ಮಲಯಾಳಂ) ಅರುಣ್‌ಲಾಲ್
ಲಿಟಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್, ಕೇರಳ

Tags:
error: Content is protected !!