ಮೈಸೂರು : ಜೂನ್ 26 ರಂದು ಬೆಳಗ್ಗೆ 10 ಗಂಟೆಯಿoದ ಸಂಜೆ 6 ಗಂಟೆಯವರೆಗೆ ವಿ.ವಿ. ಮೊಹಲ್ಲಾ ವಿಭಾಗ ವ್ಯಾಪ್ತಿಯ 66/11 ಕೆ.ವಿ ಜಿ.ಐ.ಎಸ್ ಕಲಾಮಂದಿರ ವಿದ್ಯುತ್ ವಿತರಣಾ ಕೇಂದ್ರದಲ್ಲಿ 1ನೇ ತ್ರೈಮಾಸಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಳ್ಳಲಾಗಿರುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು :
ಸರಸ್ವತಿಪುರಂ 1 ರಿಂದ 5ನೇ ಮೇನ್, ನ್ಯೂ ಕಾಂತರಾಜ ಅರಸ್ ರಸ್ತೆ, ಕೆ.ಜಿ. ಕೊಪ್ಪಲು ಮುಖ್ಯರಸ್ತೆ, ಯುನಿವರ್ಸಿಟಿ ಕ್ವಾರ್ಟ್ರಸ್, ಮುಸ್ಲಿಂ ಹಾಸ್ಟೆಲ್, ವಿಶ್ವಮಾನವ ಜೋಡಿ ರಸ್ತೆ ಮುರಗನ್ ಮೆಡಿಕಲ್ಸ್ಯಿಂದ ಕುಕ್ಕರಹಳ್ಳಿ ಕೆರೆ ರಸ್ತೆಯವರೆಗೆ, ಸರಸ್ವತಿಪುರಂ 5 ರಿಂದ 16ನೇ ಮೇನ್, ಪಡುವರಾಹಳ್ಳಿ, ಡಿ.ಸಿ. ರೆಸಿಡೆನ್ಸಿ, ರಿಜನಲ್ ಕಮಿಷನರ್ ಆಫೀಸ್, ಸಿ.ಎಫ್.ಟಿ.ಆರ್.ಐ ಕ್ಯಾಂಪಸ್, ವಾಲ್ಮೀಕಿ ರಸ್ತೆ, ಜಡ್ಜ್ ಕ್ವಾರ್ಟ್ರಸ್, ಒಂಟಿಕೊಪ್ಪಲು, ಹುಣಸೂರು ಮುಖ್ಯರಸ್ತೆ, ವಾಗ್ದೇವಿ ನಗರ, ಜೆ.ಸಿ. ಕಾಲೇಜು ಸುತ್ತಮುತ್ತ, ಚಾಮರಾಜ ಮೊಹಲ್ಲಾ, ಜಿಲ್ಲಾ ಪಂಚಾಯತ್ ಕಛೇರಿ, ಕೋರ್ಟ್, ಅರಸು ರಸ್ತೆ, ಜಿಲ್ಲಾಽಕಾರಿ ಕಛೇರಿ, ಮಹಾರಾಜ ಮತ್ತು ಯುವರಾಜ ಕಾಲೇಜು ಸುತ್ತಮುತ್ತ, ಶಿವರಾಂಪೇಟೆ, ದಿವಾನ್ಸ್ ರಸ್ತೆ, ಧನ್ವಂತರಿ ರಸ್ತೆ, ಜೆ.ಕೆ.ಗ್ರೌಂಡ್ ಸುತ್ತಮುತ್ತಲಿನ ಪ್ರದೇಶ, ಮೆಟ್ರೋಪೋಲ್ ಸುತ್ತಮುತ್ತ, ಜೆ.ಎಲ್.ಬಿ ರಸ್ತೆ, ಜಯಲಕ್ಷ್ತ್ರ್ಮಿಪುರಂ ವಿಲಾಸ್, ಜಿಲ್ಲಾ ಪಂಚಾಯತ್ ಕಛೇರಿ, ನ್ಯಾಯಾಲಯದ ಆವರಣ, ಏರ್‌ಲೈನ್ಸ್ ಹೊಟೇಲ್ ರಸ್ತೆ, ಮಹಾರಾಜ ಹಾಸ್ಟೆಲ್ ಏರಿಯಾ, ಗೀತಾ ರಸ್ತೆ, ರಾಮಸ್ವಾಮಿ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಚಾ.ವಿ.ಸ.ನಿ.ನಿ.,ಯ ವಿ.ವಿ ಮೊಹಲ್ಲಾ ವಿಭಾಗದ, ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





